ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ 6 ದಿನಗಳ ಕಾಲ ಜಾರಿ ನಿರ್ದೇಶನಾಲಯ(ಇ.ಡಿ.)ದ ವಶಕ್ಕೆ ಒಪ್ಪಿಸಿದೆ. ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಶುಕ್ರವಾರ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು.
ಇ.ಡಿ. ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಕೇಜ್ರೀವಾಲ್ ಅವರನ್ನು ಅಬಕಾರಿ ನೀತಿ ಅಕ್ರಮದ ಪ್ರಮುಖ ಸಂಚುಕೋರಎAದು ನ್ಯಾಯಪೀಠದ ಮುಂದೆ ಬಣ್ಣಿಸಿದ್ದಾರೆ.
ಅನುಷ್ಠಾನಗೊಳಿಸಿದ್ದನ್ನು ಲಾಭ ಮಾಡಿಕೊಂಡ ಸೌತ್ಗ್ರೂಪ್ ಎಂದು ಕರೆಯಲಾಗುವ ದಕ್ಷಿಣ ರಾಜ್ಯಗಳ ಉದ್ಯಮಿಗಳಿಂದ ಕೇಜ್ರೀವಾಲ್ಗೆ ಹಲವಾರು ಕೋಟಿ ರೂಪಾಯಿ ಸಂದಾಯವಾಗಿದೆ. ಒಂದು ನೂರು ಕೋಟಿ ರೂಪಾಯಿ ನೀಡುವಂತೆ ಕೇಜ್ರೀವಾಲ್ ಅವರನ್ನು ಒತ್ತಾಯಿಸಿದ್ದರು ಎಂದು ವಿವರಿಸಿದ್ದಾರೆ.ಈ ಅಕ್ರಮದಿಂದ ನಾಲ್ಕು ಹವಾಲಾ ಮಾರ್ಗಗಳಿಂದ ಬAದ 45 ಕೋಟಿ ರೂಪಾಯಿಯನ್ನು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಆರೋಪಿಗಳು ನೀಡಿರುವ ಹೇಳಿಕೆಗಳಿಗೆ ಕಾಲ್ ಡೀಟೈಲ್ ರೆಕಾರ್ಡ್(ಸಿಡಿಆರ್) ಪೂರಕವಾಗಿದೆ ಎಂದರು. ಕೇಜ್ರಿವಾಲ್ ನನ್ನ ಜೊತೆ ಮದ್ಯಪಾನದ ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ದೆಹಲಿ ಮುಖ್ಯಮಂತ್ರಿಯಾದಾಗ ಮದ್ಯದ ನೀತಿ ರೂಪಿಸುತ್ತಿದ್ದಾರೆ ಎಂದು ಗೊತ್ತಾದ ಕೂಡಲೇ ಅದನ್ನು ವಿರೋಧಿಸಿ ನಾನು ಹಲವು ಪತ್ರಗಳನ್ನು ಬರೆದಿದ್ದೆ. ಇದೀಗ ಅದರಲ್ಲಿ ನಡೆದಿರುವ ಅಕ್ರಮಗಳಿಗೆ ಬಂಧನಕ್ಕೀಡಾಗಿದ್ದಾರೆ. ಕಾನೂನು ಏನು ಹೇಳುತ್ತದೋ ಅವರು ಅದೇ ರೀತಿ ನಡೆದುಕೊಳ್ಳುವುದು ಅನಿವಾರ್ಯ’ ಎಂದು ತನ್ನ ಶಿಷ್ಯನಿಗೆ ಅಣ್ಣಾ ಹಜಾರೆ ಹೇಳಿದ್ದಾರೆ. ಅವರ ಪರಿಸ್ಥಿತಿ ನೋಡಿ ಕಳವಳವಾಗುತ್ತಿದೆ ಎಂದಿದ್ದಾರೆ. 2010 ರಲ್ಲಿ ಲೋಕಪಾಲ ಕಾಯ್ದೆ ಜಾರಿಗೆ ಒತ್ತಾಯಿಸಿ ಚಳವಳಿ ನಡೆಸಿದಾಗ ಹಜಾರೆ ಅವರೊಂದಿಗೆ ಪ್ರಮುಖ ಪಾತ್ರವಹಿಸಿದವರು ಕೇಜ್ರಿವಾಲ್.ಆಮ್ ಅದ್ಮಿಪಾರ್ಟಿ ಪ್ರಾರಂಭಿಸಿ ಚನಾವಣೆಕಣಕ್ಕೆ ಕೇಜ್ರಿವಾಲ್ ಇಳಿದ ಮೇಲೆ ಅಣ್ಣಾ ಹಿಂದಕ್ಕೆ ಸರಿದರು.
ಸುಪ್ರೀಂ ಕೋರ್ಟ್ ಅರ್ಜಿ ವಾಪಸ್
ಬಂಧನವನ್ನು ಪ್ರಶ್ನಿಸಿ ಗುರುವಾರ ರಾತ್ರಿಯೇ ಸುಪ್ರೀಂ ಕೋರ್ಟ್ ಕೇಜ್ರೀವಾಲ್ ಮೊರೆ ಹೋಗಿದ್ದರು. ತುರ್ತು ವಿಚಾರಣೆಗೆ ಮನವಿ ಮಾಡಿಕೊಂಡಿದ್ದರು. ಆದರೆ ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಇತ್ತೀಚೆಗೆ ಕವಿತಾ ಬಂಧನದ ಸಮಯದಲ್ಲಿ ಅವರೂ ಸುಪ್ರೀಂ ಕೋರ್ಟ್ ಹೋಗಿದ್ದರು. ಅವರ ಅರ್ಜಿಯನ್ನು ನಿರಾಕರಿಸಿದ್ದ ಸುಪ್ರೀಂ ಕೋರ್ಟ್,ಮೊದಲು ಕೆಳ ನ್ಯಾಯಾಲಯಕ್ಕೆ ಹೋಗಿ ನಂತರ ಸುಪ್ರೀಂಗೆ ಬರಬೇಕು ಎಂದು ಹೇಳಿತ್ತು. ಇದನ್ನು ಪರಿಗಣಿಸಿ ಅರ್ಜಿ ವಾಪಸ್ ಪಡೆದುಕೊಳ್ಳಲಾಗಿದೆ.
ಜೈಲಿಂದ ಆಡಳಿತ ಸಾಧ್ಯವೇ?
1. ಮುಖ್ಯಮಂತ್ರಿಯನ್ನು ಬಂಧನ ಮಾಡಿದ ತಕ್ಷಣ ಅವರು ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ.
2.ಜೈಲಿನ ಕೈಪಿಡಿಯಂತೆ ಬಂಧಿತರನ್ನು ಕಾರಾಗೃಹದಲ್ಲಿ ವಾರಕ್ಕೆರಡು ಬಾರಿ ಮನೆಯವರು ಹೋಗಿ ಭೇಟಿಯಾಗಬಹುದು.
3.ಮುಖ್ಯಮಂತ್ರಿಯಾದವರು ಅಧಿಕಾರಿಗಳ ಜೊತೆ ಚರ್ಚಿಸಬೇಕಾಗುತ್ತದೆ. ಆದರೆ ಅವರನ್ನು ಜೈಲಿಗೆ ಕರೆಸಿಕೊಳ್ಳಲು ಸಾಧ್ಯವಿಲ್ಲ.
4.ಅನೇಕ ಗೌಪ್ಯ ದಾಖಲೆಗಳನ್ನು ಸಿಎಂ ಪರಿಶೀಲಿಸಬೇಕಾಗುತ್ತದೆ. ಇದನ್ನು ಜೈಲಿಗೆ ತರಿಸಿಕೊಳ್ಳಲು ಅವಕಾಶವಿಲ್ಲ. ಜೈಲಿನಿಂದಲೇ ಆಡಳಿತ ನಡೆಸಲು ತಾಂತ್ರಿಕ ಸಮಸ್ಯೆಗಳಿವೆ.
5.ಆದರೆ ಗೃಹಬಂಧನಕ್ಕೆ ಕೇಜ್ರಿವಾಲ್ ಮನವಿ ಮಾಡಿಕೊಂಡಲ್ಲಿ, ಅದಕ್ಕೆ ನ್ಯಾಯಾಲಯ ಸಮ್ಮತಿಸಿದಲ್ಲಿ ಆಡಳಿತ ನಡೆಸಬಹುದಾಗಿದೆ.
6.ಆಪ್ ತನ್ನ ಪಟ್ಟನ್ನು ಮುಂದುವರಿಸಿದರೆ, ರಾಷ್ಟçಪತಿ ಆಡಳಿತ ತರಲು ಲೆಫ್ಟಿನೆಂಟ್ ಗವರ್ನರ್ಗೆ ಅವಕಾಶವಿದೆ. ಹೀಗಾಗಿ ಹೊಸ ಮುಖ್ಯಮಂತ್ರಿಯನ್ನು ಆಪ್ ಪ್ರಕಟಿಸುವ ಸಾಧ್ಯತೆ ಇದೆ.
courtsey : S.K


