Thursday, November 21, 2024
Flats for sale
Homeವಾಣಿಜ್ಯನವದೆಹಲಿ : ಆರೋಗ್ಯ ವಿಮೆ- ಟರ್ಮ್ ಜೀವ ವಿಮೆ ಪಾಲಿಸಿಗಳ ಮೇಲೆ ಜಿಎಸ್ ಟಿ ರದ್ದತಿಗೆ...

ನವದೆಹಲಿ : ಆರೋಗ್ಯ ವಿಮೆ- ಟರ್ಮ್ ಜೀವ ವಿಮೆ ಪಾಲಿಸಿಗಳ ಮೇಲೆ ಜಿಎಸ್ ಟಿ ರದ್ದತಿಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ..!

ನವದೆಹಲಿ : ಮುಂಬರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆರೋಗ್ಯ ವಿಮೆ ಮತ್ತು ಟರ್ಮ್ ಜೀವವಿಮೆ ಪಾಲಿಸಿಗಳ ಮೇಲೆ ಜಿಎಸ್ ಟಿ ತೆಗೆದುಹಾಕಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ವಿಮೆ ಮೇಲಿನ ಜಿಎಸ್ ಟಿ ತೆಗೆದುಹಾಕಲು ಸಾರ್ವಜನಿಕರಿಂದ ವ್ಯಾಪಕ ಒತ್ತಡಗಳು ಬಂದ ಹಿನ್ನೆಲೆಯಲ್ಲಿ ಜಿಎಸ್‌ಟಿ ತೆಗೆದು ಹಾಕಲು ಮುಂದಾಗಿದೆ. ಜಿಎಸ್‌ಟಿ ಕೌನ್ಸಿಲ್‌ನ ಸಚಿವ ಉಪಸಮಿತಿ ಇತ್ತೀಚೆಗೆ ಈ ನಿಟ್ಟಿನಲ್ಲಿ ಸಭೆ ನಡೆಸಿತ್ತು. ಇದರಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಮತ್ತು ಪಾಲಿಸಿದಾರರಿಗೆ ಪರಿಹಾರ ನೀಡಲು ವಿಮೆ ಮೇಲಿನ ಜಿಎಸ್‌ಟಿ ರದ್ದತಿಯನ್ನು ಬಹುತೇಕ ಸದಸ್ಯರು ಬೆಂಬಲಿಸಿದರು.

ಸಾಮಾನ್ಯ ಜನರು ತೆಗೆದುಕೊಳ್ಳುವ ರೂ.5 ಲಕ್ಷದೊಳಗಿನ ಆರೋಗ್ಯ ವಿಮಾ ಪಾಲಿಸಿಗಳ ಮೇಲೆ ಈ ವಿನಾಯಿತಿ ಲಭ್ಯವಿರುತ್ತದೆ. 5 ಲಕ್ಷಕ್ಕಿಂತ ಹೆಚ್ಚಿನ ಪಾಲಿಸಿಗಳಿಗೆ 18 ಪ್ರತಿಶತ ಜಿಎಸ್‌ಟಿ ಮುಂದುವರಿಯುತ್ತದೆ. ಇವುಗಳ ಜೊತೆಗೆ ಸೈಕಲ್ ಮತ್ತು ವೋಟ್ ಬುಕ್‌ಗಳ ಮೇಲೆ ಈಗಿರುವ ಜಿಎಸ್‌ಟಿಯನ್ನು ಶೇ.12 ರಿಂದ ಶೇ.5 ಕ್ಕೆ ಇಳಿಸುವ ಪ್ರಸ್ತಾವನೆಗಳು 10000 ರೂ. 20 ಲೀರ‍್ಗಿಂತ ಹೆಚ್ಚಿನ ಪ್ಯಾಕೇಜ್ಡ್ ಕುಡಿಯುವ ನೀರಿನ ಮೇಲಿನ ಜಿಎಸ್‌ಟಿಯನ್ನು ಶೇಕಡಾ 18 ರಿಂದ 5 ಕ್ಕೆ ಇಳಿಸಲು ಉದ್ದೇಶಿಸಲಾಗಿದೆ. ಇದರಿಂದ ಆಗುವ ಆದಾಯ ನಷ್ಟವನ್ನು ಸರಿದೂಗಿಸಲು ಕೆಲವು ಐಷಾರಾಮಿ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ.18 ರಿಂದ ಶೇ.28ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ.

ಮುಂದಿನ ತಿಂಗಳು ನಡೆಯಲಿರುವ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular