ನವದೆಹಲಿ ; ಇತ್ತೀಚಿನ ದಿನಗಳಲ್ಲಿ ಕೆಲವು ತನ್ನದೇ ನಾಯಕರ ಹೇಳಿಕೆಗಳಿಂದ ಹಲವು ಟೀಕೆಗಳನ್ನು ಎದುರಿಸುತ್ತಿರುವ ಕಾಂಗ್ರೆಸ್, ಮತ್ತೆ ಅಂತಹದ್ದೇ ಟೀಕೆಗೆ ಗುರಿಯಾಗಿ ಮುಜುಗರಕ್ಕೀಡಾಗಿದೆ.
ಭಾರತವು ಪಾಕಿಸ್ತಾನವನ್ನು ಗೌರವಿಸಬೇಕು, ಅವರ ಬಳಿ ಅಣುಬಾಂಬ್ಗಳಿವೆ ಎಂದು ಹೇಳಿಕೆ ನೀಡಿರುವ ಮಣಿಶಂಕರ್ ಅಯ್ಯರ್ ಹೇಳಿಕೆ ಮತ್ತೊಮ್ಮೆ ಕಾಂಗ್ರೆಸ್ನ್ನು ಮುಜುಗರಕ್ಕೀಡು ಮಾಡಿದೆ. ಭಾರತೀಯ ಸಾಗರೋತ್ತರ ಕಾಂಗ್ರೆಸ್ನ ಅಧ್ಯಕ್ಷ ಶ್ಯಾಂಪಿತ್ರೋಡ ಭಾರತದ ಕುರಿತಂತೆ ತಮ್ಮ ಹೇಳಿಕೆಗೆ ಇದೀಗ ರಾಜೀನಾಮೆ ನೀಡಿದ್ದಾರೆ. ಆ ಘಟನೆ ಮರೆಯುವ ಮುನ್ನವೇ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ಪಾಕ್ ಮೇಲಿನ ತಮ್ಮ ಪ್ರೀತಿಯನ್ನು ಹೇಳಿಕೆ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊAದರಲ್ಲಿ ಭಾರತ ಪಾಕ್ನೊಂಡಿಗೆ ಮಾತನಾಡಬೇಕು. ಅವರ ಬಳಿ ಅಣು ಬಾಂಬ್ ಇರುವುದರಿಂದ ಅವರನ್ನು ಗೌರವಿಸಬೇಕು ಎಂದು ಪ್ರತಿಪಾದಿಸಿದ್ದರು. ಹಾಗೂ ಪಾಕಿಸ್ತಾನ ಸಹ ಸಾರ್ವಭೌಮ ರಾಷ್ಟ್ರ ಮತ್ತು ಗೌರವಾನ್ವಿತ ರಾಷ್ಟ್ರ ಆ ಗೌರವವನ್ನು ಉಳಿಸಿಕೊಂಡು ನಿಮಗೆ ಬೇಕಾದಷ್ಟು ಕಠೋರವಾಗಿ ಮಾತನಾಡಿ, ಆದರೆ ಕನಿಷ್ಠವಾಗಿ ಮಾತನಾಡಬೇಡಿ. ನಿಮ್ಮ ಕೈಯಲ್ಲಿ ಬಂಧೂಕು ಇದ್ದರೂ ಸಹ ಅದರಲ್ಲಿ ಯಾವುದೇ ಪರಿಹಾರ ದೊರೆಯುವುದಿಲ್ಲ. ಅದರಿಂದ ಉದ್ವಿಗ್ನತೆ ಹೆಚ್ಚಾಗುತ್ತದೆ.ಅವರ ಬಳಿ ಅಣುಬಾಂಬ್ಗಳಿವೆ. ಅದನ್ನು ಪ್ರಯೋಗಿಸಿದರೆ ಏನಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಹೇಳಿರುವುದು ಮತ್ತೊಮ್ಮೆ ಕಾಂಗ್ರೆಸ್ ಮುಜಗರಕ್ಕೀಡಾಗುವಂತೆ ಮಾಡಿದೆ.