Monday, February 9, 2026
Flats for sale
Homeವಾಣಿಜ್ಯನವದೆಹಲಿ : ಅದಾನಿಗೆ ಒಂದು ಸಾವಿರ ಕೋಟಿ ರೂ.ವಿದ್ಯುತ್ ಬಿಲ್ ಬಾಕಿ ಇಟ್ಟ ಬಾಂಗ್ಲಾದೇಶ.

ನವದೆಹಲಿ : ಅದಾನಿಗೆ ಒಂದು ಸಾವಿರ ಕೋಟಿ ರೂ.ವಿದ್ಯುತ್ ಬಿಲ್ ಬಾಕಿ ಇಟ್ಟ ಬಾಂಗ್ಲಾದೇಶ.

ನವದೆಹಲಿ : ಭಾರತದ ಅತಿದೊಡ್ಡ ಕೈಗಾರಿಕಾ ಸಂಸ್ಥೆಯಾದ ಅದಾನಿ ಗ್ರೂಪ್ ಬಾಂಗ್ಲಾದೇಶಕ್ಕೆ ನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡುತ್ತಿದ್ದರೂ ಈಚೆಗೆ ಬಾಂಗ್ಲಾ ಒಂದು ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ ಮಾಡಿದೆ.

ಈ ಹಿನ್ನೆಲೆಯಲ್ಲಿ ಬಾಕಿ ಪಾವತಿ ಮಾಡದಿದ್ದರೆ ಬಾಂಗ್ಲಾದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದೆಂದು ಅದಾನಿ ಗ್ರೂಪ್ ಈಗ ಬಾಂಗ್ಲಾಕ್ಕೆ ಎಚ್ಚರಿಕೆ ನೀಡಿದೆ. ಬಾಂಗ್ಲಾದಲ್ಲಿ ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರ ನಿರ್ಗಮಿಸುವ ಮುಂಚಿತವಾಗಿಯೇ ಅದಾನಿ ಗ್ರೂಪ್ ಬಾಕಿ ಪಾವತಿಗೆ ಸಂಬAಧಿಸಿದ ಪತ್ರ ರವಾನಿಸಿದೆ.

ಬಾಂಗ್ಲಾದೇಶಕ್ಕೆ 25 ವರ್ಷಗಳ ಕಾಲ ಜಾರ್ಖಂಡ್‌ನ ಗೊಡ್ಡಾ ವಿದ್ಯುದುತ್ಪಾದನಾ ಕೇಂದ್ರದಿAದ ವಿದ್ಯುತ್ ಪೂರೈಕೆ ಮಾಡುವ ಸಂಬAಧ 2017ರಲ್ಲಿ ಅದಾನಿ ಗ್ರೂಪ್ ಒಪ್ಪಂದ ಮಾಡಿಕೊAಡಿತ್ತು. ಆದರೆ ಶೇಖ್ ಹಸೀನಾ ಸರ್ಕಾರ ಪತನದ ನಂತರ ಪರಿಸ್ಥಿತಿ ಬದಲಾಗಿದ್ದು ಒಪ್ಪಂದದನುಸಾರ ಬಾಂಗ್ಲಾದೇಶ ಬಾಕಿ ಮೊತ್ತ ಪಾವತಿಸುತ್ತಿಲ್ಲ ಎಂದು ಅದಾನಿ ಗ್ರೂಪ್ ದೂಷಿಸಿದೆ.

ಒಪ್ಪಂದದನುಸಾರ ಅದಾನಿ ಪವರ್ ಸಂಸ್ಥೆ 1600 ಮೆಗಾವ್ಯಾಟ್ ವಿದ್ಯುತ್ ಪೂರೈಸಿದೆ. ಆದರೆ 2024ರ ಅಕ್ಟೋಬರ್‌ನಲ್ಲಿ ಯೂನಸ್ ಸರ್ಕಾರ ಬಿಲ್ ಪಾವತಿ ಮೊತ್ತವನ್ನು ಅರ್ಧಕ್ಕೆ ಇಳಿಸಿರುವುದರಿಂದ ಅದಾನಿ ಪವರ್‌ಗೆ ಬಾಂಗ್ಲಾ ನೀಡಬೇಕಾದ ಬಾಕಿಮೊತ್ತ ಹೆಚ್ಚಲಾರಂಭಿಸಿದೆ. ಈಗಾಗಲೇ ಅದಾನಿ ಗ್ರೂಪ್ ಬಾಂಗ್ಲಾಕ್ಕೆ ಪತ್ರ ಬರೆದ ನಂತರ ತುಸು ಬಾಕಿ ಮೊತ್ತ ಪಾವತಿಸಿದೆ. ಈ ಮಧ್ಯೆ ಬಾಂಗ್ಲಾದಿAದ ಬಾಕಿ ಹಣ ಬಾರದಿರುವ ಕಾರಣ ವಿದ್ಯುದುತ್ಪಾದನೆಗೆ ಕಲ್ಲಿದ್ದಲು ಖರೀದಿಸಲು ತೊಂದರೆಯಾಗಿದೆ ಎAದು ಅದಾನಿ ಗ್ರೂಪ್ ತಿಳಿಸಿದೆ. ಬಾಂಗ್ಲಾ ಸರ್ಕಾರದ ಸಮಿತಿಯೊಂದು ಈಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular