ನವದೆಹಲಿ : ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಗಬ್ಬಾ ಟೆಸ್ಟ್ ವೇಳೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ರವಿಚಂದ್ರನ್ ಅಶ್ವಿನ್ 37 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 116 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್‌ಗಳನ್ನು ಕಬಳಿಸಿದ ರವಿಚಂದ್ರನ್ ಅಶ್ವಿನ್, ಟೆಸ್ಟ್ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ.
ಅನಿಲ್ ಕುಂಬ್ಳೆ (619 ವಿಕೆಟ್) ಮೊದಲ ಸ್ಥಾನದಲ್ಲಿದ್ದಾರೆ. ಭಾರತ ಮತ್ತು ಆಸ್ಟೆçÃಲಿಯಾ ನಡುವಿನ ಮೂರನೇ ಟೆಸ್ಟ್ ಡ್ರಾ ನಂತರ ರವಿಚಂದ್ರನ್ ಅಶ್ವಿನ್ಅ ವರ ನಿವೃತ್ತಿ ಘೋಷಣೆ ಹೊರಬಿದ್ದಿದೆ.ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಬಾರ್ಡರ್ ಗವಾಸ್ಕರ್ ತಂಡದ ಭಾಗವಾಗಿದ್ದಾರೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಇದುವರೆಗೆ ಮೂರು ಪಂದ್ಯಗಳು ಪೂರ್ಣಗೊಂಡಿವೆ.ಅಶ್ವಿನ್ ಒಂದೇ ಒಂದು ಪಂದ್ಯದಲ್ಲಿ ಆಡಿದ್ದಾರೆ.
ಎರಡನೇ ಟೆಸ್ಟ್ನಲ್ಲಿ ಅಶ್ವಿನ್ ಒಂದು ವಿಕೆಟ್ ಪಡೆದರು. ಮೂರನೇ ಟೆಸ್ಟ್ಗೆ ಅಶ್ವಿನ್ ಬದಲಿಗೆ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಭಾರತೀಯ ಕ್ರಿಕೆಟಿಗನಾಗಿ ಇದು ನನ್ನ ಕೊನೆಯ ವರ್ಷ ಎಂದು ರವಿಚಂದ್ರನ್ ಅಶ್ವಿನ್ ಬ್ರಿಸ್ಬೇನ್ ಟೆಸ್ಟ್ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ .
ಮೂರನೇ ಟೆಸ್ಟ್ನ5 ನೇ ದಿನದಂದು ಮಳೆಯಿಂದ ಆಟ ಸ್ಥಗಿತಗೊಂಡಾಗ ಅಶ್ವಿನ್ ಕೊಹ್ಲಿಯೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಬಹುಶಃ ನಿವೃತ್ತಿಯ ಬಗ್ಗೆ. ಅಶ್ವಿನ್ 106 ಟೆಸ್ಟ್ ಪಂದ್ಯಗಳಲ್ಲಿ537 ವಿಕೆಟ್ ಪಡೆದಿದ್ದರು. ಅಶ್ವಿನ್ ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ. ಅವರು 106 ಟೆಸ್ಟ್ಗಳಲ್ಲಿ 3,503 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕ 15 ಅರ್ಧಶತಕಗಳಿವೆ. ಅಶ್ವಿನ್ ಬೌಲರ್ ಆಗಿ ಆರಂಭವಾದರೂ ಟೆಸ್ಟ್ ನಲ್ಲಿ ಆಲ್ ರೌಂಡರ್ ಆಗಿ ಬೆಳೆದಿದ್ದಾರೆ .ಏಕದಿನದಲ್ಲಿ 116 ಪಂದ್ಯಗಳಲ್ಲಿ 156 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20ಯಲ್ಲಿ 65 ಪಂದ್ಯಗಳನ್ನಾಡಿದ್ದು, 72 ವಿಕೆಟ್ ಪಡೆದಿದ್ದಾರೆ. ಒಡಿಐ ಮತ್ತು ಟಿ20ಗಳಿಗೆ ಹೋಲಿಸಿದರೆ ಅಶ್ವಿನ್ ಟೆಸ್ಟ್ನಲ್ಲಿ ಸೂಪರ್ ಸಕ್ಸಸ್ ಆಗಿದ್ದಾರೆ. ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಕೊಹ್ಲಿ ಜೊತೆ ಅಶ್ವಿನ್ ಭಾವುಕರಾದ ವಿಡಿಯೋ ವೈರಲ್ ಆಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಲೆಜೆಂಡರಿ ಸ್ಪಿನ್ನರ್ ಎಂದೇ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಅವರಿಗೆ ಸರಿಯಾದ ವಿದಾಯ ಪಂದ್ಯ ಸಿಗದಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಅಂತರಾಷ್ಟಿçÃಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಅಶ್ವಿನ್ ಗುರುವಾರ ಭಾರತಕ್ಕೆ ಬರಲಿದ್ದಾರೆ.
ಈ ವಿಷಯವನ್ನು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆಎಲ್ಲರಿಗೂ ಧನ್ಯವಾದ………
ನನ್ನ ಕ್ರಿಕೆಟ್ ಜೀವನದಲ್ಲಿ ನೆರವಾದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಬಿಸಿಸಿಐ, ನನ್ನ ತಂಡ, ನನ್ನ ಕೋಚ್ ಬಳಗ ಎಲ್ಲರೂ ತಮ್ಮ ಕ್ರಿಕೆಟ್ ಜೀವನದ ಭಾಗವಾಗಿದ್ದಾರೆ ಎಂದು ರವಿಚಂದ್ರನ್ ಅಶ್ವಿನ್ ಹೇಳಿದರು.
ಮುಖ್ಯವಾಗಿನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಇತರ ಆಟಗಾರರು ವಿಕೆಟ್ ಹಿಂದೆ ನಿಂತು ಕ್ಯಾಚ್‌ಗಳನ್ನು ಹಿಡಿದು ನನಗೆ ವಿಕೆಟ್ ಗಳಿಸುವಲ್ಲಿ ನೆರವಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ಇದು ನನ್ನ ಪಾಲಿಗೆ ಭಾವನಾತ್ಮಕ ಕ್ಷಣ, ಕ್ರಿಕೆಟ್ ಆಟವನ್ನು ತುಂಬಾ ಆನAದಿಸುತ್ತೇನೆ. ರೋಹಿತ್ ಶರ್ಮಾ ಮತ್ತು ಇತರೆ ತಂಡದ ಆಟಗಾರರ ಜತೆ ಸ್ಮರಣೀಯ ನೆನಪುಗಳಿವೆ. ತಮ್ಮಲ್ಲಿ ಇನ್ನೂ ಸಾಮಾರ್ಥ್ಯವಿದೆ ಎಂದು ನಾನು ನಂಬಿದ್ದೇನೆ. ಇದನ್ನು ಕ್ಲಬ್ ಮಟ್ಟದ ಕ್ರಿಕೆಟ್‌ನಲ್ಲಿ ಪ್ರದರ್ಶಿಸಲಿದ್ದೇನೆ ಎಂದು ಹೇಳಿದ್ದಾರೆ.