Saturday, March 14, 2026
Flats for sale
Homeಕ್ರೀಡೆನವದೆಹಲಿ : WPL : ಲೀಗ್ ಹಂತ ಅಂತ್ಯ: ಫೈನಲ್‌ಗೆ ಡೆಲ್ಲಿ.

ನವದೆಹಲಿ : WPL : ಲೀಗ್ ಹಂತ ಅಂತ್ಯ: ಫೈನಲ್‌ಗೆ ಡೆಲ್ಲಿ.

ನವದೆಹಲಿ : 2 ನೇ ಮಹಿಳಾ ಪ್ರೀಮಿಯರ್ ಲೀಗ್ ಪ್ಲೇ ಆಫ್ ಹಂತ ಸೇರಿಕೊಂಡಿದೆ. ಲೀಗ್ ಹಂತದ ಪAದ್ಯಗಳು ಅಂತ್ಯಗೊAಡಿದ್ದು, ಗುಜರಾತ್ ಜಯಂಟ್ಸ್ ವಿರುದ್ಧದ ಗೆಲುವಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಸೇರಿಕೊಂಡಿದೆ. ಇದರಿಂದ ಮಾರ್ಚ್ 15ರಂದು ಆರ್‌ಸಿಬಿ ಹಾಗೂ ಮುಂಬೈ ತಂಡಗಳು ಫೈನಲ್‌ಗಾಗಿ ಕಾದಾಡಲಿವೆ.

ಇದಕ್ಕೂ ಮುನ್ನ ನಡೆದ ಡೆಲ್ಲಿ ವಿರುದ್ಧದ ಕೊನೆ ಲೀಗ್ ಹಂತದ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ತಂಡ ಭಾರತಿ ಫುಲ್ಮೆನಿ ಅವರ 42 ಹಾಗೂ ಕ್ಯಾಥ್ರಿನ್ ಬ್ರೇಸ್ 24 ರನ್‌ಗಳ ನೆರವಿನಿಂದ 126 ರನ್ ಗಳ ಸಾಧಾರಣ ಮೊತ್ತ ಕಲೆಹಾಕಿತು. ತಮ್ಮ ಕೊನೆ ಪಂದ್ಯದಲ್ಲಿ ಗುಜರಾತ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು.

ಜಯಂಟ್ಸ್ ತಂಡದ ನಾಯಕಿ ಬೆಥ್ ಮೂನಿ ಸೇರಿ ಮೂವರು ಒಂದಂಕಿ ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಆಶ್ಲೇ ಗಾರ್ಡ್ನರ್ ಕೂಡ 12 ರನ್ ಗಳಿಸಿ ನಿರ್ಗಮಿಸಿದರು.

ಕೊನೆ ಓವರ್‌ನಲ್ಲಿ ಕ್ಯಾಥ್ರಿನ್ ಬ್ರೇಸ್ ಕೊಚ ಹೋರಾಡಿದ ಪರಿಣಾಮ, ಗುಜರಾತ್ 127 ರನ್‌ಗಳ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಸುಲಭ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ತಂಡ ನಾಯಕಿ ಮೆಗ್ ಲಾನಿಂಗ್ 18 ಹಾಗೂ ಅಲೈಸಿ ಕ್ಯಾಪ್ಸಿಯನ್ನು 4ನೇ ಓವರ್‌ನಲ್ಲಿ ಕಳೆದುಕೊಂಡಿತು. ಆದರೆ, ಶಫಾಲಿ ವರ್ಮಾರ ಜವಾಬ್ದಾರಿಯುತ 71 ರನ್‌ಗಳ ನೆರವಿನಿಂದ ಗೆದ್ದು ಬೀಗಿತು.

ಸಂಕ್ಷಿಪ್ತ ಸ್ಕೋರ್: ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ126 ರನ್. ಭಾರತಿ 42, ಕ್ಯಾಥ್ರಿನ್ 24 ರನ್. ಡೆಲ್ಲಿ 13.1 ಓವರ್‌ಗಳಲ್ಲಿ 3 ವಿಕೆಟ್‌ಗೆ 129 ರನ್.

RELATED ARTICLES

LEAVE A REPLY

Please enter your comment!
Please enter your name here

Most Popular