ಧಾರವಾಡ : ರೈತರಿಗೆ ಭೂಸ್ವಾಧೀನದ ಪರಿಹಾರ ನೀಡದ ಹಿನ್ನೆಲೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ 63 ರ ಕಚೇರಿ ಜಪ್ತಿ ಮಾಡಲು ಧಾರವಾಡ ಜಿಲ್ಲಾ ಪ್ರಧಾನ ನ್ಯಾಯಾಲಯದ ಆದೇಶ ಹೊರಡಿಸಿದೆ.
ಧಾರವಾಡ ಜಿಲ್ಲಾ ಪ್ರಧಾನ ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ನಗರದ ವಿದ್ಯಾಗಿರಿ ಬಡಾವಣೆಯಲ್ಲಿರೋ ಕಚೇರಿಯ ಪೀಠೋಪಕರಣ, ಕಂಪ್ಯೂಟರ್, ವಾಹನಗಳನ್ನೂ ಜಪ್ತಿ ಮಾಡಲಾಗಿದೆ.
2012 ರಲ್ಲಿ ರಾ. ಹೆ. 63 ಕ್ಕೆ ಸಂಬಂಧಪಟ್ಟ ಭೂ ಸ್ವಾಧೀನ ಪ್ರಕ್ರಿಯೆಗೆ ಗದಗ್ ನಗರದ ಹೊರಭಾಗದಲ್ಲಿನ ಕೃಷಿಯೇತರ ಜಮೀನನ್ನು ರಾ.ಹೆ. ಪ್ರಾಧಿಕಾರ ಪ್ರತಿ ಚ. ಮೀಟರ್‌ಗೆ ರೂ. 1800/- ನಿಗದಿಪಡಿಸಿದ್ದು ಆಗ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಕಾರಣ 20 ರೈತರು ಅದನ್ನು ಪ್ರಶ್ನಿಸಿ ಡಿಸಿ ಕೋರ್ಟ್ ಮೊರೆ ಹೋಗಿದ್ದರು . ಈ ಬಗ್ಗೆ ಗದಗ ಡಿಸಿ ಪ್ರತಿ ಚ. ಮೀಟರ್‌ಗೆ ರೂ. 3400/- ನಿಗದಿಪಡಿಸಿ ಆದೇಶಿಸಿದ್ದರು ಅದನ್ನು ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ರಾ.ಹೆ. ಪ್ರಾಧಿಕಾರ ಪ್ರಶ್ನಿಸಿದ್ದು ಆದರೆ ಡಿಸಿ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.
ಪರಿಹಾರವನ್ನು ನೀಡಿದ್ದ ಪ್ರಾಧಿಕಾರ ಆದರೆ 2012ರಿಂದ ಬಡ್ಡಿ ಹಣ ನೀಡಲು ಹಿಂದೇಟು ಹಾಕಿತ್ತು.ರೈತರು ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಕಾರಣ ರೈತರಿಗೆ ಪಾವತಿಯಾಗಬೇಕಿರೋ ರೂ. 10 ಕೋಟಿ ಬಡ್ಡಿ ಹಣ ನೀಡದ್ದಕ್ಕೆ ಕಚೇರಿ ಜಪ್ತಿಗೆ ಆದೇಶ ನೀಡಿದೆ.ಈ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿಯಿಂದ ರಾ. ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕರ ಕಚೇರಿ ಜಪ್ತಿಮಾಡಿದ್ದಾರೆ.


