ಧಾರವಾಡ : ತಾಯಿಯೇ ದೇವರು ಎನ್ನುತ್ತಾರೆ ಆದರೆ ಇಲ್ಲಿ ಒಬ್ಬ ಪಾಪಿ ಮಗ ಹೆತ್ತ ತಾಯಿಯನ್ನೇ ಕೊಂದು ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ಜಿಲ್ಲೆಯ ಹೊಸಯಲ್ಲಾಪುರ ಬಡಾವಣೆಯ ಉಡುಪಿ ಓಣಿಯಲ್ಲಿ ನಡೆದಿದೆ.
ಮೃತರನ್ನು ತಾಯಿ ಶಾರದಾ ಭಜಂತ್ರಿ (60) ಹಾಗೂ ಮಗ ರಾಜೇಂದ್ರ ಭಜಂತ್ರಿ (40) ಎಂದು ತಿಳಿದುಬಂದಿದೆ.ರಾಜೇಶ್ ತಾಯಿ ಶಾರಾದಾ ಭಜಂತ್ರಿಗೆ ರಾಡ್ನಿಂದ ಹಿಡೆದು ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸರ್ಕಾರಿ ಉದ್ಯೋಗದಲ್ಲಿದ್ದು ನಿವೃತ್ತರಾಗಿದ್ದ ಶಾರದಾ ಭಜಂತ್ರಿ ಮಗ ರಾಜೇಶ್ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದನು. ತಾಯಿಗೆ ಬರುತ್ತಿದ್ದ 19 ಸಾವಿರ ಪಿಂಚಣಿ ಹಣ ಮತ್ತು ಆಸ್ತಿ ಮೇಲೆ ರಾಜೇಶ್ ಕಣ್ಣಿಟ್ಟಿದ್ದನು.ಹಣಕ್ಕಾಗಿ ಸದಾ ತಾಯಿಯನ್ನು ಪೀಡಿಸುತ್ತಿದ್ದ ಈತ ಪಿಂಚಣಿ ಹಣ ನನಗೆ ನೀಡು ಮತ್ತು ಖಾಲಿ ಜಾಗವನ್ನು ತನ್ನ ಹೆಸರಿಗೆ ಮಾಡುವಂತೆ ರಾಜೇಶ್ ತಾಯಿ ಶಾರದಾ ಭಜಂತ್ರಿ ದುಂಬಾಲು ಬಿದ್ದಿದ್ದನು. ಆದರೆ ಶಾರಾದಾ ಭಜಂತ್ರಿ ಇದಕ್ಕೆ ನಿರಾಕರಿಸಿದ್ದಳು. ಇದರಿಂದ ಇಬ್ಬರ ನಡುವೆ ಜಗಳವಾಗಿದ್ದು ಜಗಳ ತಾರಕಕ್ಕೇರಿದೆ. ಇದೀಗ ತಾಯಿಯನ್ನು ರಾಡ್ನಿಂದ ಹೊಡೆದು ಕೊಲೆ ಮಾಡಿ ಬಳಿಕ ತಾನೂ ನೇಣು ಬಿಗಿದುಕೊಂಡು ಸತ್ತಿದ್ದಾನೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


