ದೊಡ್ಡಬಳ್ಳಾಪುರ : ಕೋಳೂರು ಗ್ರಾಮದ ತೋಟದ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದವಿನೋದಮ್ಮ ಮತ್ತು ರಾಮಾಂಜಿನಪ್ಪ ದಂಪತಿ ನಿನ್ನೆ ಶುಕ್ರವಾರ ಸಂಜೆ ತೋಟದ ಕೆಲಸದಲ್ಲಿ ನಿರಂತರಾಗಿದ್ದರು. ಈ ವೇಳೆ ಮನೆ ಹೊರಗೆ ಆಟ ಆಡುತ್ತಿದ್ದ ಬಾಲಕಿ ಅನುಷಾಗೆ ಹಾವು ಕಚ್ಚಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಮೃತಪಟ್ಟ ಬಾಲಕಿಯನ್ನು ಅನುಷಾ (7) ಎಂದು ತಿಳಿದುಬಂದಿದೆ.
ಕೂಡಲೆ ಮಗಳು ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಪೋಷಕರು ದೊಡ್ಡಬಳ್ಳಾಪುರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನುಷಾ ಮೃತಪಟ್ಟಿದ್ದಾಳೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


