Wednesday, November 5, 2025
Flats for sale
Homeವಾಣಿಜ್ಯದೆಹಲಿ : ಇಂದಿನಿಂದ ಪೇಟಿಎಂ ಫಾಸ್ಟ್ಯಾಗ್ ಸ್ಥಗಿತ,ನಿಮ್ಮ ಖಾತೆಯ ಸ್ಟೇಟಸ್ ಪರಿಶೀಲಿಸಿ!

ದೆಹಲಿ : ಇಂದಿನಿಂದ ಪೇಟಿಎಂ ಫಾಸ್ಟ್ಯಾಗ್ ಸ್ಥಗಿತ,ನಿಮ್ಮ ಖಾತೆಯ ಸ್ಟೇಟಸ್ ಪರಿಶೀಲಿಸಿ!

ದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪಾವತಿಗಳು ಸಂಪೂರ್ಣವಾಗಿ ಮಾರ್ಚ್ 15ರ ನಂತರ ಸ್ಥಗಿತಗೆೊಳ್ಳಲಿವೆ. ನೀವೇನಾದರೂ ಪೇಟಿಎಂ ಫಾಸ್ಟ್ಯಾಗ್ ಹೊಂದಿದ್ದರೆ, ನಾಳೆಯೊಳಗೆ ಬೇರೊಂದು ಖಾತೆೆಗೆ ನಿಮ್ಮ ಪಾಸ್ಟ್ಯಾಗ್ ಅನ್ನು ವರ್ಗಾಯಿಸಿಕೊಳ್ಳಬೇಕು. ಇಲ್ಲದೆ, ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿ ದುಪ್ಪಟ್ಟು ಹಣವನ್ನು ಪಾವತಿಸಬೇಕಾಗುತ್ತದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಸ ಗ್ರಾಹಕರನ್ನು ಹೊಂದದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ RBI ನಿಷೇಧಿಸಿದ್ದು, ಯಾವುದೇ ಗ್ರಾಹಕರ ಖಾತೆಗಳು, ಪ್ರಿಪೇಯ್ಡ್ ಕಾರ್ಡ್‌ಗಳು, ಪೇಟಿಎಂ ವ್ಯಾಲೆಟ್‌ಗಳು, ಫಾಸ್ಟ್ಯಾಗ್‌ಗಳು, ಕ್ರೆಡಿಟ್ ವಹಿವಾಟು, ಟಾಪ್-ಅಪ್‌ಗಳನ್ನು ಸ್ವೀಕರಿಸುವುದಿಲ್ಲ. ಇದರರ್ಥ ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರು ಮಾರ್ಚ್ 15 ರೊಳಗೆ ತಮ್ಮ ಖಾತೆಯನ್ನು ಮುಚ್ಚಬೇಕಾಗುತ್ತದೆ. ಎನ್ಎಚ್ಎಐ ಅಧಿಕೃತ ವಿತರಕರಿಂದ ಹೊಸ ಫಾಸ್ಟ್ಯಾಗ್‌ ಪಡೆಯಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) “ತಡೆರಹಿತ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಅನಾನುಕೂಲತೆಯನ್ನು ತಪ್ಪಿಸಲು 2024ರ ಮಾರ್ಚ್ 15 ರೊಳಗೆ ಪೇಟಿಎಂ ಫಾಸ್ಟ್ಯಾಗ್‌ಗಳನ್ನು ಹೊಂದಿರುವ ಗ್ರಾಹಕರು ಮತ್ತೊಂದು ಬ್ಯಾಂಕ್‌ನಲ್ಲಿ ಹೊಸ ಫಾಸ್ಟ್ಯಾಗ್‌ಗಳನ್ನು ಖರೀದಿಸಬೇಕೆಂದು ಎನ್‌ಎಚ್‌ಎಐ ಸಲಹೆ ನೀಡಿದೆ. ಇದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ದಂಡ ಅಥವಾ ಯಾವುದೇ ದುಪ್ಪಟ್ಟು ಶುಲ್ಕಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಪೇಟಿಎಂ ಫಾಸ್ಟ್ಯಾಗ್‌ ಬಳಕೆದಾರರು 2024ರ ಮಾರ್ಚ್ 15 ರ ನಂತರ ಬ್ಯಾಲೆನ್ಸ್ ಅನ್ನು ರೀಚಾರ್ಜ್ ಮಾಡಲು ಅಥವಾ ಟಾಪ್-ಅಪ್ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಈಗಾಗಲೇ ಉಳಿದಿರು ಬ್ಯಾಲೆನ್ಸ್ ಅನ್ನು ನಿಗದಿತ ದಿನಾಂಕದ ನಂತರ ಟೋಲ್ ಪಾವತಿಗಳಲ್ಲಿ ಬಳಸಬಹುದು.

ಪೇಟಿಎಂ ಫಾಸ್ಟ್ಯಾಗ್‌ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
ಪೇಟಿಎಂ ಟೋಲ್ ಫ್ರೀ ಸಂಖ್ಯೆ: 1800-120-4210 ಗೆ ಕರೆ ಮಾಡಿ ಮತ್ತು ವಾಹನ ನೋಂದಣಿ ಸಂಖ್ಯೆ ಅಥವಾ ಟ್ಯಾಗ್ ಐಡಿಯೊಂದಿಗೆ ಟ್ಯಾಗ್‌ಗೆ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಫಾಸ್ಟ್ಯಾಗ್‌ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಲು ಪೇಟಿಎಂ ಪೇಮೆಂಟ್ ಬ್ಯಾಂಕ್‌ಗಳ ಗ್ರಾಹಕ ಬೆಂಬಲ ಏಜೆಂಟ್ ನಿಮ್ಮನ್ನು ಸಂಪರ್ಕಿಸುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular