ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬಿಡುಗಡೆಗೊಳಿಸಿರುವ ನೂತನ ಟೆಸ್ಟ್ ರ‍್ಯಾಂಕಿAಗ್‌ಗಳ ಪಟ್ಟಿಯಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಅಗ್ರಸ್ಥಾನ ಸಂಪಾದಿಸಿದ್ದು, ದಾಖಲೆ ಬರೆದಿದ್ದಾರೆ. ಆಸ್ಟೆçÃಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳೆದ ೪ ಪಂದ್ಯಗಳಲ್ಲಿ 30 ವಿಕೆಟ್ಸಂ ಪಾದಿಸಿರುವ ಬುಮ್ರಾ, ಐಸಿಸಿ ರ‍್ಯಾಂಕಿAಗ್‌ನಲ್ಲಿ ಒಟ್ಟು 907ಅಂಕಗಳನ್ನು ಸಂಪಾದಿಸಿದ್ದಾರೆ.
ಈ ಮೂಲಕ ಭಾರತೀಯ ಬೌಲರ್‌ಗಳ ಪೈಕಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದ್ದು, ಈ ಮುನ್ನ 2016ರಲ್ಲಿ ಸ್ಪಿನ್ನರ್ ಆರ್. ಅಶ್ವಿನ್ 907 ಅಂಕಗಳನ್ನು ಪಡೆದು, ಗರಿಷ್ಠ ಅಂಕ ಸಂಪಾದಿಸಿದ ಭಾರತೀಯ ಎನ್ನಿಸಿಕೊಂಡಿದ್ದರು. ಈಗ ಬುಮ್ರಾ ಈ ದಾಖಲೆ ಮುರಿದಿದ್ದು, ವಿಶೇಷ ಸಾಧನೆಗೆ ಒಳಪಟ್ಟಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಅತ್ತ ಅಶ್ವಿನ್ ದಾಖಲೆಯನ್ನು ಮುರಿದ್ದಿದ್ದಲ್ಲದೇ, 907 ಅಂಕಪಡೆದ ವಿಶ್ವದ 17ನೇ ಆಟಗಾರ ಎಂಬ ಖ್ಯಾತಿಗೂ ಒಳಪಟ್ಟಿದ್ದಾರೆ. ಇಂಗ್ಲೆAಡಿನ ಡಾರೆಕ್ ಅಂಡರ್‌ವುಡ್ 1972ರಲ್ಲಿ ನ್ಯೂಜಿಲೆಂಡ್ ವಿರುದ್ಧದ
ಟೆಸ್ಟ್ನಲ್ಲಿ 12ವಿಕೆಟ್ ಸಂಪಾದಿಸಿ, 907 ಅಂಕ ಪಡೆದುಕೊಂಡಿದ್ದರು. ಸದ್ಯ ಬುಮ್ರಾ 907 ರ‍್ಯಾಂಕಿAಗ್ ಪಾಯಿಂಟ್‌ಗಳೊAದಿಗೆ, ಅಂಡರ್‌ವುಡ್ಸಾ ಧನೆಯನ್ನು ಸರಿಗಟ್ಟಿದ್ದಾರೆ.