Friday, January 16, 2026
Flats for sale
Homeಕ್ರೀಡೆದುಬೈ : ಭಾರತಕ್ಕೆ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ 7 ವಿಕೆಟ್‌ಗಳ ಜಯಭೇರಿ,ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಸೇನೆಗೆ...

ದುಬೈ : ಭಾರತಕ್ಕೆ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ 7 ವಿಕೆಟ್‌ಗಳ ಜಯಭೇರಿ,ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಟೀಮ್ ಇಂಡಿಯಾ …!

ದುಬೈ : ಭಾರಿ ವಿರೋಧ, ಸಾಕಷ್ಟು ವಿವಾದಗಳನ್ನೇ ಹೊತ್ತು ಆರಂಭಗೊAಡ ಬದ್ಧವೈರಿ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯಭೇರಿ ಸಾದಿಸಿದ್ದು, ಏಷ್ಯಾಕಪ್ ಸೆಮಿಫೈನಲ್‌ಗೂ ಲಗ್ಗೆಯಿಟ್ಟಿದೆ. ಕೇವಲ 128ರನ್‌ಗಳ ಗುರಿ ಪಡೆದ ಭಾರತ ಕೇವಲ 15.5 ಓವರ್‌ಗಳಲ್ಲೇ 3 ವಿಕೆಟ್ ಕಳೆದುಕೊಂಡು ಗೆದ್ದಿದ್ದು ವಿಶೇಷ. ಪಾಕಿಸ್ತಾನದ ಪರ ಆರಂಭಿಕ ಆಟಗಾರ ಸಹಿಬ್‌ ಜಾದಾ ಫರ್ಹನ್ 41 ರನ್ ಹಾಗೂ ಬಾಲಂಗೋಚಿ ಶಾಹೀನ್ ಅಫ್ರಿದಿ ಅಜೇಯ 33 ರನ್‌ಗಳಿಸಿದ ಪರಿಣಾಮ ಪಾಕಿಸ್ತಾನ ನೂರರ ಗಡಿ ದಾಟಲು ಸಾಧ್ಯವಾಯಿತು.

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್‌ನಲ್ಲಿ ಆರಂಭಿಕ ಆಟಗಾರ ಸಯ್ಯಿಮ್ ಅಯೂಬ್ ಶೂನ್ಯಕ್ಕೆ ಜಸ್‌ಪ್ರೀತ್ ಬುಮ್ರಾಗೆ ಕ್ಯಾಚ್ ನೀಡಿದರು. ಇದರಿಂದ ಸ್ಟೇಡಿಯಂನಲ್ಲಿದ್ದ ಭಾರತೀಯ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.

ಮರು ಓವರ್‌ನಲ್ಲೇ ವೇಗಿ ಜಸ್‌ಪ್ರೀತ್ ಬುಮ್ರಾ ದಾಳಿಗೆ ಮೊಹಮ್ಮದ್ ಹ್ಯಾರಿಸ್ 3 ರನ್‌ಗಳಿಸಿ ಹಾರ್ದಿಕ್‌ಗೆ ಕ್ಯಾಚ್ ನೀಡಿದರು. ಇದರಿಂದ ತಂಡದ ಮೊತ್ತ 10 ರನ್ ದಾಟುವಷ್ಟರಲ್ಲೇ ತನ್ನ 2 ವಿಕೆಟ್‌ಗಳನ್ನು ಕಳೆದುಕೊಂಡು ಸAಕಷ್ಟಕ್ಕೆ ಸಿಲುಕಿತು.

ಸ್ಪಿನ್ ದಾಳಿಗೆ ಮಧ್ಯಮ ಕ್ರಮಾಂಕ ಕುಸಿತ ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಟಗಾರ ಫರ್ಹನ್ ಹಾಗೂ ಫಕರ್ ಜಮಾನ್ ಕಾಪಾಡುವ ಯತ್ನ ಮಾಡಿ, ಮೊದಲ ಪವರ್ ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ಪವರ್‌ಪ್ಲೇ ಮುಗಿಯುತ್ತಿದ್ದಂತೆ ಭಾರತದ ಸ್ಪಿನ್ ಅಟ್ಯಾಕ್ ಆರಂಭವಾಯಿತು. ಅದರಲ್ಲೂ ಕುಲ್‌ದೀಪ್ ಯಾದವ್‌ರ ಸ್ಪಿನ್ ಕೈ ಚಳಕ ಪಾಕ್ ಬ್ಯಾಟರ್‌ಗಳನ್ನು ಬಹುವಾಗಿ ಕಾಡಲು ಆರಂಭಿಸಿತು. 17 ರನ್‌ಗಳಿಸಿದ್ದ ಫಕರ್ ಜಮಾನ್ ಅವರನ್ನು ಅಕ್ಷರ್ ಪಟೇಲ್ ಔಟ್ ಮಾಡಿದರೆ, ಮಧ್ಯಮ ಕ್ರಮಾಂಕದಲ್ಲಿ ಪ್ರಮುಖರಾಗಿ ಕಾಣಿಸಿಕೊಂಡಿದ್ದ ನಾಯಕ ಸಲ್ಮಾನ್ ಅಘಾ 3 ರನ್‌ಗಳಿಸಿ ಅಕ್ಷರ್ ಪಟೇಲ್‌ಗೆ ಎರಡನೇ ಅವರಾಗಿ ವಿಕೆಟ್ ನೀಡಿದರು. ಇದಾದ ಬಳಿಕ ಕುಲ್‌ದೀಪ್ ಯಾದವ್ ಹಸನ್ ನವಾಜ್ ಅವರನ್ನು 6 ರನ್‌ಗಳಿಗೆ ಹಾಗೂ ಮೊಹಮ್ಮದ್ ನವಾಜ್ ಅವರನ್ನು ಶೂನ್ಯಕ್ಕೆ ಎಲ್‌ಬಿ ಬಲೆಗೆ ಉರುಳಿಸಿದರು.

ಅಲ್ಲದೇ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಫರ್ಹನ್‌ರನ್ನೂ ಕೂಡ ಔಟ್ ಮಾಡುವಲ್ಲಿ ಯಶಸ್ವಿಯಾದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ಫಹೀಮ್ ಅರ್ಶಫ್ 11 ರನ್‌ಗಳಿಸಿ ಸಮಾಧಾನ ಪಟ್ಟರು. ಸ್ಲಾಗ್ ಓವರ್‌ಗಳಲ್ಲಿ ಅಫ್ರಿದಿ ಮಿಂಚು ಪಾಕಿಸ್ತಾನ 127 ರನ್‌ಗಳನ್ನು ಗಳಿಸಲು ಪ್ರಮುಖ ಕಾರಣವೇ ಬಾಲಂಗೋಚಿ ಶಾಹೀನ್ ಅಫ್ರಿದಿ. ಸ್ಲಾಗ್ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಬಂದ ಅಫ್ರಿದಿ ಕೇವಲ 16 ಎಸೆತಗಳಲ್ಲೇ ಅಜೇಯ 33 ರನ್ ಗಳಿಸಿದರು. ಅಲ್ಲದೇ, 2೦ನೇ ಓವರ್‌ನಲ್ಲಿ ಸತತವಾಗಿ ಹಾರ್ದಿಕ್ ಪಾಂಡ್ಯ ಅವರಿಗೆ 2 ಸಿಕ್ಸರ್ ಬಾರಿಸಿದರು. ಇದರಿಂದ ಪಾಕಿಸ್ತಾನ 120ರ ಗಡಿ ದಾಟಿತು.

ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸುವ 31 ರನ್ ಗಳಿಸಿ ಅದೇ ಸಯಂ ಅಯೂಬ್‌ಗೆ ವಿಕೆಟ್ ನೀಡಿದರು. ಆದರೆ, ಸೂರ್ಯ ಹಾಗೂ ಶಿವಂ ದುಬೆ ತಂಡಕ್ಕೆ ಜಯ ತಂದಿಟ್ಟರು.

ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್. ಫರ್ಹನ್ 40, ಅಫ್ರಿದಿ ಅಜೇಯ 33 ರನ್. ಕುಲ್‌ದೀಪ್ 18 ಕ್ಕೆ 3 ವಿಕೆಟ್. ಅಕ್ಷರ್ 18 ಕ್ಕೆ 2 ವಿಕೆಟ್. ಬುಮ್ರಾ 28ಕ್ಕೆ 2 ವಿಕೆಟ್. ಭಾರತ 15.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್. ಸೂರ್ಯ ಅಜೇಯ 47, ತಿಲಕ್ 31, ಅಭಿಷೇಕ್ 31 ರನ್.

ಪಂದ್ಯದ ಆರಂಭಕ್ಕೂ ಮುನ್ನ ನಡೆದ ಟಾಸ್ ಪ್ರಕ್ರಿಯೆಯಲ್ಲೂ ಉಭಯ ತಂಡಗಳ ನಾಯಕರಾದ ಭಾರತದ ಸೂರ್ಯಕುಮಾರ್ ಯಾದವ್ ಹಾಗೂ ಪಾಕ್‌ನ ಸಲ್ಮಾನ್ ಅಘಾ ಹಸ್ತಲಾಘವ ಮಾಡದೇ ಟಾಸ್ ಪ್ರಕ್ರಿಯೆ ಮುಗಿಸಿ ವಾಪಸ್ಸಾದರು. ಪಂದ್ಯದ ಬಳಿಕವೂ ಯಾರೂ ಶೇಕ್ ಹ್ಯಾಂಡ್ ಮಾಡಲಿಲ್ಲ.

ಯಾದವ್ 35 ನೇ ವಸಂತಕ್ಕೆ ಕಾಲಿಟ್ಟರು. ಇದೇ ಮೊದಲ ಬಾರಿಗೆ ಭಾರತ ತಂಡವನ್ನು ಏಷ್ಯಾಕಪ್ ನಲ್ಲಿ ಮುನ್ನಡೆಸಿದ್ದ ಸೂರ್ಯನಿಗೆ ಪಾಕ್ ವಿರುದ್ಧದ ಗೆಲುವು ಹುಟ್ಟುಹಬ್ಬದ ಉಡುಗೊರೆಯಾಗಿ ಸಿಕ್ಕಿದ್ದು ವಿಶೇಷ. ಅಲ್ಲದೇ, ಬ್ಯಾಟಿಂಗ್‌ನಲ್ಲೂ ಸೂರ್ಯ ಮಿಂಚಿದ್ದು ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿತು

RELATED ARTICLES

LEAVE A REPLY

Please enter your comment!
Please enter your name here

Most Popular