Wednesday, October 22, 2025
Flats for sale
Homeರಾಜ್ಯದಾವಣಗೆರೆ : ಶವಸಂಸ್ಕಾರ ಮಾಡಲು ನೀಡದ ಭೂಮಿ - ಗ್ರಾಮ ಪಂಚಾಯಿತಿ ಒಳಗೆ ಶವ ಸಂಸ್ಕಾರ...

ದಾವಣಗೆರೆ : ಶವಸಂಸ್ಕಾರ ಮಾಡಲು ನೀಡದ ಭೂಮಿ – ಗ್ರಾಮ ಪಂಚಾಯಿತಿ ಒಳಗೆ ಶವ ಸಂಸ್ಕಾರ ಮಾಡಲು ಹೊರಟ ಗ್ರಾಮಸ್ಥರು.

ದಾವಣಗೆರೆ : ನ್ಯಾಮತಿ ತಾಲೂಕಿನ ಬಸನಹಳ್ಳಿ ಗ್ರಾಮ ಪಂಚಾಯಿತಿ ಒಳಗೆ ಶವ ಇಟ್ಟು ಪ್ರತಿಭಟನೆ ಮಾಡಿದ ಘಟನೆ ಇಂದು ವರದಿಯಾಗಿದೆ . ಗ್ರಾಮಸ್ಥರು ಪಟ್ಟುಹಿಡಿದ ಕಾರಣ ಸ್ಥಳಕ್ಕೆ ಅಧಿಕಾರಿಗಳೂ ಶಾಸಕರು ತಹಶೀಲ್ದಾರರು ಪೊಲೀಸರು ಬಂದರು ಈ ಸಮಸ್ಯೆ ಬಗೆಹರಿಯಲಿಲ್ಲ .

ಶವ ಸಂಸ್ಕಾರ ಮಾಡಲು ಭೂಮಿ ಇಲ್ಲದ ಕಾರಣ ಇಷ್ಟು ವರ್ಷಗಳಿಂದ ಇನ್ನೂ ಕೂಡ ಬಗೆಹರಿಯದ ಸಮಸ್ಯೆಗೆ ರೊಚ್ಚಿಗೆದ್ದ ಜನ ಶವವನ್ನು ಗ್ರಾಮ ಪಂಚಾಯತಿ ಒಳಗೆ ಇಟ್ಟು ಪ್ರತಿಭಟಿಸಿದ್ದಾರೆ . ಗ್ರಾಮಸ್ಥರು ಶವಸಂಸ್ಕಾರ ಮಾಡಲು ಭೂಮಿ ಕೊಡಿ ಇಲ್ಲದೆ ಹೋದರೆ ಗ್ರಾಮ ಪಂಚಾಯಿತಿ ಒಳಗೆ ಶವ ಸಂಸ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ .

ಕೆಲವು ವರುಷಗಳಿಂದ ಶವ ಸಂಸ್ಕಾರ ಮಾಡಲು ಭೂಮಿ ಕೊಡಬೇಕು ಎಂದು ಗ್ರಾಮಸ್ಥರು ಮನವಿಮಾಡುತ್ತಿದ್ದರು ಆದರೂ ಭೂಮಿ ಸಿಗಲಿಲ್ಲ,ಈ ಬಗೆ ಹರಿಯದ ಸಮಸ್ಯೆಗೆ ಜಿಲ್ಲಾಧಿಕಾರಿಗಳು ಬರುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ , ಮೃತ ದೊಡ್ಡಪ್ಪ ತಂದೆ ಚಿಕ್ಕಪ್ಪ ಎಂಬುವವರ ಮೃತ ದೇಹ ಗ್ರಾಮ ಪಂಚಾಯತಿ ಒಳಗೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular