ದಾವಣಗೆರೆ : ಮಾಜಿ ಸಚಿವ ಬಿ.ಸಿ. ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಸಿ ಪಾಟೀಲ್ ದೊಡ್ಡ ಮಗಳಾದ ಸೌಮ್ಯ ಅವರ ಗಂಡ ಪ್ರತಾಪ್ ಕುಮಾರ್ ಅವರು ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ.ಇದನ್ನು ಗಮಿಸಿದ ಸ್ಥಳೀಯರು ಪ್ರತಾಪ್ ಕುಮಾರ್ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಕುಮಾರ್ ಮೃತಪಟ್ಟಿದ್ದಾರೆ.
ಅಳಿಯನ ಸಾವಿನ ಬಳಿಕ ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಸಿ ಪಾಟೀಲ್2008ರಲ್ಲಿ ನನ್ನ ಪುತ್ರಿ ಸೌಮ್ಯ ಜೊತೆ ಪ್ರತಾಪ್ ಕುಮಾರ್ ವಿವಾಹವಾಗಿತ್ತು ನನ್ನ ವ್ಯವಹಾರ ,ರಾಜಕೀಯ ಸೇರಿದಂತೆ ಎಲ್ಲವನ್ನು ಪ್ರತಾಪ್ ಮನೆ ಮಗನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ. ಮದುವೆಯಾಗಿ 16 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ ಎಂಬ ಕೊರಗು ಇತ್ತು.
KA 68 M 1458 ನಂಬರಿನ Venue ಕಾರಿನಲ್ಲಿ ಬಂದಿದ್ದ ಪ್ರತಾಪಕುಮಾರ, ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಬರುವ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ಬಳಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ. ಕಾರಿನಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಆದ್ರೆ, ಪ್ರತಾಪಕುಮಾರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪ್ರತಾಪ್ ಕುಮಾರ್ ಬಿಸಿ ಪಾಟೀಲ್ ಅವರ ಹೆಂಡತಿಯ ಸ್ವಂತ ತಮ್ಮ. ಇವರಿಗೆ ದೊಡ್ಡ ಮಗಳು ಸೌಮ್ಯ ಅವರನ್ನೇ ಕೊಟ್ಟು ಬಿಸಿ ಪಾಟೀಲ್ ಮದುವೆ ಮಾಡಿದ್ದರು. ಅಂದರೆ ಅಕ್ಕನ ಮಗಳನ್ನೇ ಪ್ರತಾಪ್ ಕುಮಾರ್ ಮದುವೆಯಾಗಿದ್ದರು. ದಾವಣಗೆರೆ ಕತ್ತಲಗೆರೆ ಗ್ರಾಮದ ಮೃತ ಪ್ರತಾಪ್ ಕುಮಾರ್ ಬದುಕಲ್ಲಿ ಎಲ್ಲವೂ ಸರಿಯಿತ್ತು. ಆದ್ರೂ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಅಳಿಯ ಮೃತಪಟ್ಟ ಮಾಹಿತಿ ತಿಳಿದ ಕೂಡಲೇ ಬಿ.ಸಿ ಪಾಟೀಲ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಇಷ್ಟೇ ಅಲ್ಲ ಬಿಸಿ ಪಾಟೀಲ್ ಅವರೊಂದಿಗೆ ಇದ್ದು, ರಾಜಕೀಯ ವ್ಯವಹಾರ ನೋಡಿಕೊಳ್ಳುತ್ತಿದ್ದರು ಪ್ರತಾಪ್. ಜೊತೆಗೆ 90 ಎಕರೆ ಜಮೀನು ನೋಡಿಕೊಂಡು ಕೆಲಸ ಮಾಡಿಸುತ್ತಿದ್ದರು. ಮದುವೆ ಆಗಿ 14 ವರ್ಷ ಆದ್ರೂ ಮಕ್ಕಳು ಇರಲಿಲ್ಲ. ಆದ್ರೂ ಖುಷಿಯಾಗಿ ಪ್ರತಾಪ್ ಮತ್ತು ಸೌಮ್ಯ ಜೊತೆಯಲ್ಲೇ ಇದ್ದರು.