ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಅವರು ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಮನೆಯಲ್ಲೇ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂಬ ಹೇಳಿಕೆ ನೀಡುವ ಮೂಲಕ ಎರಡು ನಾಮ ಹಾಕಿಕೊಂಡು ಟೆಂಪಲ್ ರನ್ ಮಾಡುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಮೂರನೇ ನಾಮ ಹಾಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯತೀಂದ್ರ ಅವರನ್ನು ಬೆಳಗಾವಿಗೆ ಕಳುಹಿಸಿ, ಸತೀಶ ಜಾರಕಿಹೊಳಿ ಮನೆಯಲ್ಲೇ ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ ಜಾರಕಿಹೊಳಿ ಅಂತಾ ಹೇಳಿಕೆ ಕೊಡಿಸಿದ್ದಾರೆ. ಇದರಿಂದ ಟೆಂಪಲ್ ರನ್ ಮಾಡುತ್ತಿರುವ ಡಿಕೆಗೆ ಯತೀಂದ್ರ ಮೂರನೇ ನಾಮ ಹಾಕಿದ್ದಾರೆ.
ಟೆಂಪಲ್‌ಗಿAತಲೂ ಕಾಂಗ್ರೆಸ್ ಪಕ್ಷದ ದೊಡ್ಡ ಟೆಂಪಲ್ ಇಟಲಿ ಟೆಂಪಲ್‌ನ್ನು ಡಿ.ಕೆ.ಶಿವಕುಮಾರ್ ಸುತ್ತಬೇಕು. ಇಟಲಿ ಟೆಂಪಲ್ ಸುತ್ತಿ, ಕಪ್ಪ ಕಾಣಿಗೆ ನೀಡಿದರೆ ಮಾತ್ರವೇ ನೀವು ಮುಖ್ಯಮಂತ್ರಿಯಾಗುತ್ತೀರಿ ಎAದು ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸಚಿವರನ್ನು ಕರೆದಿದ್ದು ಡಿನ್ನರ್ ಪಾರ್ಟಿಗೆ ಅಲ್ಲ, ಬಿಹಾರ ಚುನಾವಣೆಗೆ ಕಲೆಕ್ಷನ್ ಪಾರ್ಟಿಯಾಗಿತ್ತು. ಈ ಪಾರ್ಟಿಯಲ್ಲಿ ಯಾವ್ಯಾವ ಸಚಿವರು ಎಷ್ಟು ಕೊಡುತ್ತೀರಾ ಅಂತಾ ಹೇಳಿದ್ದೇ ತಡ ಕೆಲವರು ಊಟ ಮಾಡದೇ ಓಡಿ ಹೋದರಂತೆ. ಒಬ್ಬೊಬ್ಬ ಸಚಿವರಿಗೆ ರೂ. 3೦೦-4೦೦ ಕೋಟಿ ಕಲೆಕ್ಷನ್ ಅಂತಾ ಹೇಳಿದ್ದಾರೆ. ಸಚಿವ ಸ್ಥಾನ ಉಳಿಯಬೇಕಾದರೆ ಟಾರ್ಗೆಟ್ ರೀಚ್ ಆಗಬೇಕೆಂದಿದ್ದಾರೆ. ಕೊಟ್ಟ ಹಣ ವಸೂಲಿಯಾದರೆ ಸಚಿವರಾಗಿ ಮುಂದುವರಿಯುತ್ತಾರೆ. ಇಲ್ಲ ಅಂದರೆ ಸಚಿವ ಸ್ಥಾನದಿಂದಲೇ ಅAತಹವರಿಗೆ ಗೇಟ್‌ಪಾಸ್ ನೀಡುತ್ತಾರೆ ಎಂದರು.


