ದಾಂಡೇಲಿ : ತಮ್ಮದೇ ಸರ್ಕಾರದ ಪುಕ್ಕಟೆ ಯೋಜನೆಯ ಬಗ್ಗೆ ಅಸಮಾಧಾನ ಹೊರಹಾಕಿದವರ ಸಾಲಿಗೆ ಮತ್ತೊಬ್ಬ ಕಾಂಗ್ರೆಸ್ ಶಾಸಕರು ಸೇರ್ಪಡೆಯಾಗಿದ್ದಾರೆ. ಈಗ ಅದು ಶಾಸಕ ಆರ್.ವಿ. ದೇಶಪಾಂಡೆ ಅವರ ಸರದಿಯಾಗಿದೆ.
ದಾಂಡೇಲಿಯ ಅಂಬೇವಾಡಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ತಮ್ಮದೇ ಸರ್ಕಾರದ ಫ್ರೀ ಯೋಜನೆಗಳ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರ ನೀಡುವ ಫ್ರೀ ಯೋಜನೆಗಳಿಂದ ಪ್ರಯೋಜನವಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಎಲ್ಲರಿಗೂ ಫ್ರೀ ಬೇಕಾಗಿದೆ. ಫ್ರೀ ಏನೂ ಇರಬಾರದು ಎನ್ನುವದು ನನ್ನ ವೈಯಕ್ತಿಕ ಅಭಿಪ್ರಾಯ. ಯಾವುದೇ ಸಂಸ್ಥೆಯನ್ನು ನಡೆಸುವದು ಅಷ್ಟು ಸುಲಭವಲ್ಲ. ಹೀಗಿರುವಾಗ ಫ್ರೀ ಯೋಜನೆಯಿಂದ ಇಂತಹ ಸಂಸ್ಥೆ ನಡೆಸುವುದು ಕ್ಲಿಷ್ಟಕರವೆನಿಸುವುದು ಸಹಜ ಎಂದರು.