ತುಮಕೂರು : ಗೃಹ ಸಚಿವರ ತವರು ಜಿಲ್ಲೆಯಲ್ಲೇ ಗೃಹ ಇಲಾಖೆ ತಲೆ ತಗ್ಗಿಸುವ ಘಟನೆ ನಡೆದಿದ್ದು ದೂರು ನೀಡಲು ಬಂದ ಮಹಿಳೆಯೊಂದಿಗೆ ಕಚೇರಿಯಲ್ಲೇ ಡಿವೈಎಸ್ಪಿ ಕಾಮದಾಟ ನಡೆಸಿದ ವಿಡಿಯೋ ವೈರಲ್ ಎಡಿಎ ಬೆನ್ನಲೇ ಕಾಮುಕ ಡಿವೈಎಸ್ ಪಿ ರಾಮಚಂದ್ರಪ್ಪ ಅರೆಸ್ಟ್ ಆಗಿದ್ದಾರೆ.
ಮಧುಗಿರಿ ಡಿವೈಎಸ್ ಪಿ ರಾಸಲೀಲೆ ವೀಡಿಯೋ ರಾಜ್ಯಾದ್ಯಂತ ವೈರಲ್ ಆಗಿದ್ದು ಪೊಲೀಸ್ ಇಲಾಖೆನೆ ತಲೆತಗ್ಗಿಸುವಂತಾಗಿದೆ. ಮಧುಗಿರಿ ಪೊಲೀಸರು ಸಂತ್ರಸ್ತ ಮಹಿಳೆಯಿಂದ ದೂರು ಪಡೆದು ಎಫ್ಐಆರ್ ದಾಖಲಿಕೊಂಡಿದ್ದು ಡಿವೈಎಸ್ ಪಿ ಯನ್ನು ಬಂಧಿಸಿ ಮಧುಗಿರಿ ಪೊಲೀಸ್ ಠಾಣೆಗೆ ಪೊಲೀಸರು ಕರೆತಂದಿದ್ದಾರೆ.
ಕಾಮುಕ ರಾಮಚಂದ್ರಪ್ಪ ನನ್ನ ಮೊದಲು ಮಧುಗಿರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದು ಬಳಿಕ ಮಧುಗಿರಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಪೊಲೀಸರು ಮುಂದೆ ಹಾಜರುಪಡಿಸಿದ್ದಾರೆಂದು ಮಾಹಿತಿ ದೊರೆತಿದೆ.