ತುಮಕೂರು ; ಮದುವೆ ಮುಗಿಸಿ ಮಂಡ್ಯ ಪಟ್ಟಣದ ನಿವಾಸಿಗಳು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ತುಮಕೂರಿನ ಹುಲಿಯೂರುದುರ್ಗ ಬಳಿ ನಡೆದಿದೆ.
ಮಂಡ್ಯ ಪಟ್ಟಣದ ಚಾಮರಾಜನಗರದ ನಿವಾಸಿ ಆಕರ್ಶ್ (28), ಮೃತ ದುರ್ದೈವಿ. ಶಶಾಂಕ್ ಗೌಡ, ಜ್ಞಾನೇಶ್ವರಿ, ಶಶಾಂಕ್ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಗಾಯಗಳನ್ನು ಕುಣಿಗಲ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಶಶಾಂಕ್ ಗೌಡ ಹಾಗೂ ಜ್ಞಾನೇಶ್ವರಿ ಮದುವೆಯಾಗಿ ಕೇವಲ ಮೂರು ತಿಂಗಳಾಗಿತ್ತು. ಇಂದು ತುಮಕೂರಿನಲ್ಲಿ ಮದುವೆ ಮುಗಿಸಿ ಮಂಡ್ಯಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ.
ಮೃತದೇಹ ಕುಣಿಗಲ್ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು ,ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.


