ತುಮಕೂರು : ಬಳ್ಳಾರಿಯಲ್ಲಿ ನಡೆದ ಬಿಜೆಪಿ – ಕಾಂಗ್ರೆಸ್ ನಡುವಿನ ವಿವಾದ ಭುಗಿಲೆದ್ದಿದ್ದು ಸರಕಾರ ಜಿಲ್ಲಾ ಎಸ್ಪಿ ಯವರನ್ನು ಸಸ್ಪೆಂಡ್ ಮಾಡಿದೆ. ಆದರೆ
ಸಸ್ಪೆಂಡ್ ಆದ ಎಸ್ ಪಿ ಪವನ್ ನೆಜ್ಜೂರ್ ರವರು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬರಗೂರಿನ ಸ್ನೇಹಿತನ ಫಾರ್ಮ್ ಹೌಸ್ ನಲ್ಲಿ ಎಸ್ ಪಿ ಪವನ್ ನೆಜ್ಜೂರ್ ರವರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೂಲಗಳ ಪ್ರಕಾರ ಪವನ್ ನೆಜ್ಜೂರ್ ರವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ತಡರಾತ್ರಿ ಬಳ್ಳಾರಿಯಿಂದ ದೇವನಹಳ್ಳಿಯಲ್ಲಿರುವ ತಮ್ಮ ಮನೆಗೆ ಮರಳಿದ್ದ ಪವನ್ ನೆಜ್ಜೂರು, ಇಂದು ಮುಂಜಾನೆ ಪತ್ನಿ ಸಮೇತರಾಗಿ ಶಿರಾ ತಾಲೂಕಿನ ಬಾಗಲೂರಿನಲ್ಲಿರುವ ಸ್ನೇಹಿತನ ಫಾರ್ಮ್ಹೌಸ್ಗೆ ಹೋಗಿದ್ದರು.
ಮಧ್ಯಾಹ್ನ 12:15ರ ಸುಮಾರಿಗೆ, ಪವನ್ ಅವರು ಫಾರ್ಮ್ಹೌಸ್ನ ಕೊಠಡಿಯೊಳಗೆ ಹೋಗಿ ಸುಮಾರು 15 ನಿದ್ರೆ ಮಾತ್ರೆಗಳನ್ನು ನುಂಗಿದ್ದಾರೆ. ರೂಮ್ ಬಾಗಿಲು ತೆರೆಯದ ಕಾರಣ ಗಾಬರಿಗೊಂಡ ಪವನ್ ನೆಜ್ಜೂರು ಪತ್ನಿ ಕೂಡಲೇ ಸ್ನೇಹಿತರಿಗೆ ಕರೆ ಮಾಡಿದ್ದಾರೆ. ತಕ್ಷಣ SP ಪವನ್ ನೆಜ್ಜೂರು ಅವರನ್ನು ಸ್ನೇಹಿತನ ಸಹಾಯದಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ SP ಪವನ್ ನೆಜ್ಜೂರು ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.


