Thursday, October 23, 2025
Flats for sale
Homeಜಿಲ್ಲೆತುಮಕೂರು ; ಜಮೀನು ಕಳೆದುಕೊಳ್ಳುವ ಭೀತಿಯಲ್ಲಿ ನೂರಾರು ದಲಿತ ರೈತ ಕುಟುಂಬ,ಒಕ್ಕಲ್ಲೆಬ್ಬಿಸಿದರೆ ಸಾಮೂಹಿಕವಾಗಿ ವಿಷ ಸೇವಿಸಿ...

ತುಮಕೂರು ; ಜಮೀನು ಕಳೆದುಕೊಳ್ಳುವ ಭೀತಿಯಲ್ಲಿ ನೂರಾರು ದಲಿತ ರೈತ ಕುಟುಂಬ,ಒಕ್ಕಲ್ಲೆಬ್ಬಿಸಿದರೆ ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ..!

ತುಮಕೂರು ; ಜಮೀನು ಕಳೆದುಕೊಳ್ಳುವ ಭೀತಿಯಲ್ಲಿ ನೂರಾರು ದಲಿತ ರೈತ ಕುಟುಂಬಗಳು ಅಳಲುತೊಡಿಕೊಂಡಿದ್ದು ಒಕ್ಕಲೆಬ್ಬಿಸಿದ್ರೆ ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ ಘಟನೆ‌ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಅಂಬಾಪುರ ಗ್ರಾಮದಲ್ಲಿ ನಡೆದಿದೆ.

1965ರಿಂದಲೂ ಉಳುಮೆ ಮಾಡಿಕೊಂಡು ಬಂದ ರೈತರು ಒಕ್ಕಲೆಬ್ಬಿಸುವ ಆತಂಕದಲ್ಲಿದ್ದು,1972ರಲ್ಲಿ 73 ಮಂದಿ ಅನ್ಯ ವಾಸಿಗಳಿಗೆ ಅಧಿಕಾರಿಗಳು ಜಮೀನು ಮಂಜೂರು ಮಾಡಿರುವ ಮಾಹಿತಿ ದೊರೆತಿದೆ.

ಸರ್ವೆ ನಂ. 46 ರಲ್ಲಿ 300 ಎಕರೆ ಪೈಕಿ 117 ಎಕರೆ ಸರ್ಕಾರಿ ಜಮೀನಲ್ಲಿ
ದಲಿತ ಕುಟುಂಬಗಳು ಉಳುಮೆ ಮಾಡುತ್ತಿದ್ದು,ಸ್ಥಳ ಪರಿಶೀಲನೆಗೆ ಬಂದ ತಾಲ್ಲೂಕು ಅಧಿಕಾರಿ ಮುಂದೆ ಗ್ರಾಮಸ್ಥರು‌ ಆಳಲು ತೋಡಿಕೊಂಡಿದ್ದಾರೆ.

ಕೆಲವರಿಂದ ಮಂಜೂರಾತಿ ಸಿಗದಂತೆ ತಂತ್ರ ರೂಪಿಸಲಾಗ್ತಿದೆ ಅಂತಾ ರೈತರ ಹೇಳಿದ್ದು ಶೀಘ್ರವೇ ಮಂಜೂರಾತಿ ಹಾಗೂ ಹಕ್ಕುಪತ್ರ ನೀಡಬೇಕೆಂದು ರೈತರ ಮನವಿಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular