ತುಮಕೂರು : ತುಮಕೂರಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಭೇಟಿ ನೀಡಿ ಕಾರ್ಣಿಕ ಭವಿಷ್ಯ ಹಾಲುಮತದ ಗೊರವಯ್ಯ ನೀಡಿದೆ.
ಜಿಲ್ಲಾಧಿಕಾರಿ ಕಚೇರಿ ಅವಣದಲ್ಲಿರುವ ಉಸ್ತುವಾರಿ ಸಚಿವರ ಕಚೇರಿಗೆ ಆಗಮಿಸಿ ಹಾಲುಮತ ಜನಾಂಗದ ಗೊರವಯ್ಯನವರಿಂದ ಕಾರ್ಣಿಕ ನುಡಿ ನುಡಿದಿದ್ದಾರೆ. ಕಚೇರಿಗೆ ಕಾರ್ಣಿಕ ನುಡಿದ ಗೊರವಯ್ಯ ಆಕಸ್ಮಿಕವಾಗಿ ಭೇಟಿ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಶೀಘ್ರದಲ್ಲಿಯೇ ಇಳಿದು.ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಿ ಎಂ ಆಗಲಿ ಎಂದು ಆಶೀರ್ವಾದ ನೀಡಿದ್ದಾರೆ.
ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ನಾಗಣ್ಣ ಅವರಿಗೆ ಭವಿಷ್ಯ ನುಡಿದು, ಆಶೀರ್ವಾದ ನೀಡಿದ್ದು ಗೊರವಯ್ಯನ ಕಾರ್ಣಿಕ ಭವಿಷ್ಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪವರ್ ಶೇರಿಂಗ್, ಹನಿಟ್ರ್ಯಾಪ್ ಗದ್ದಲದ ನಡುವೆ ಸಿ.ಎಂ ಬದಲಾವಣೆ ಚರ್ಚೆ ಮುಂಚೂಣಿಯಲ್ಲಿದ್ದು ಗೊರವಯ್ಯನ ಭವಿಷ್ಯ ನಿಜವಾಗುತ್ತೊ ಎಂಬುದನ್ನು ಮುಂದೆ ಕಾದುನೋಡಬೇಕಾಗಿದೆ.


