ಟೆಹ್ರಾನ್ : ಇದೇ ಮೊದಲ ಬಾರಿಗೆ ಇರಾನ್ ರಾಜಧಾನಿ ಟೆಜ್ರಾನ್ನ ತೈಲ ಸೌಲಭ್ಯಗಳು ಹಾಗೂ ಘಟಕಗಳ ಮೇಲೆ ಭಾನುವಾರ ಇಸ್ರೇಲ್ ಭೀಕರ ದಾಳಿ ನಡೆಸಿದೆ. ತೈಲ ಘಟಕಗಳ ಮೇಲೆಯೇ ಕ್ಷಿಪಣಿ ಹಾಗೂ ಡ್ರೋನ್ಗಳು ಬಂದು ಬಿದ್ದ ಕಾರಣ ಭಾರಿ ಬೆಂಕಿ ಹಾಗೂ ಹೊಗೆ ಕಾಣಿಸಿ ಕೊಂಡಿತು. ಇದು ಎಚ್ಚರಿಕೆ ಮಾತ್ರ ಎಂದು ಹೇಳಿರುವ ಇಸ್ರೇಲ್, ಇನ್ನೂ ದೊಡ್ಡ ಪ್ರಮಾಣದ ದಾಳಿ ನಡೆಸುವುದಾಗಿ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್, ತನ್ನ ಪ್ರಾದೇಶಿಕ ನೆರೆಹೊರೆಯವರನ್ನೇ ಗುರಿಯಾಗಿಸಿಕೊಂಡು ತೈಲ ಮೂಲ ಸೌಕರ್ಯದ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಿದೆ. ಜತೆಗೆ ಬಹ್ರೇನ್ನಲ್ಲಿರುವ ಉಪ್ಪುನೀರಿನ ಸಂಸ್ಕರಣಾ ಘಟಕದ ಮೇಲೆ ದಾಳಿ ಮಾಡಿದೆ. ಇರಾನ್ ತೈಲ ಘಟಕದ ಮೇಲೆ ಇಸ್ರೇಲ್ ಮಾಡಿರುವ ದಾಳಿಯಲ್ಲಿ ಕನಿಷ್ಠ ನಾಲ್ಕು ಜನ ಮೃತಪಟ್ಟಿದ್ದಾರೆ ಎಂದು ಇರಾನ್ ಸುದ್ದಿ ಸಂಸ್ಥೆಯೊAದು ವರದಿ ಮಾಡಿದೆ. ಏತನ್ಮಧ್ಯೆ ಗಂಭೀರ ಆರೋಪವೊಂದನ್ನು ಮಾಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್, ಈ ಹಿಂದೆ ಕೂಡ ಇಸ್ರೇಲಿ ಸೇನೆ ಟೆಹ್ರಾನ್ನ ತೈಲ ಘಟಕ ಗಳನ್ನು ತನ್ನ ಸೇನಾ ಬಳಕೆಗಾಗಿ ಬಳಸಿಕೊಂಡಿದೆ. ಆದರೆ ಹಾನಿಯಾಗಿರುವುದು ಇದೇ ಮೊದಲ ಬಾರಿ ಎಂದು ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಸ್ರೇಲ್ನ ಹಾಫಿಯಾ ಸಂಸ್ಕರಣ ಘಟಕದ ಮೇಲೆ ಇರಾನ್ ಪ್ರತೀಕಾರ ದಾಳಿ ಮಾಡಿದೆ. ಇರಾನ್ ಅಧ್ಯಕ್ಷ ನೆರೆ ದೇಶಗಳ ಮೇಲೆ ಇನ್ನು ದಾಳಿ ನಡೆಸುವುದಿಲ್ಲ ಎಂದು ಹೇಳಿದ್ದರೂ ಐಆರ್ಜಿಸಿ ತನ್ನ ಸೇನಾ ಕಾರ್ಯಾಚರಣೆಯನ್ನು ಮಾತ್ರ ನಿಲ್ಲಿಸುತ್ತಿಲ್ಲ. ಭಾನುವಾರ ಅಬುಧಾಬಿ ಮೇಲೆ ಇರಾನ್ ದಾಳಿಗೆ ಯತ್ನಿಸಿದ್ದು ಕ್ಷಿಪಣಿ ಮತ್ತು ಡ್ರೋನ್ಗಳನ್ನು ತಡೆದಿದ್ದೇವೆ ಎಂದು ಯುಎಇ ಸರ್ಕಾರ ಹೇಳಿಕೊಂಡಿದೆ.


