Saturday, April 11, 2026
Flats for sale
Homeವಿದೇಶಟೆಲ್ ಅವಿವ್/ಟೆಹ್ರಾನ್ : ಇರಾನ್‌ನ ಅತಿದೊಡ್ಡ ಪೆಟ್ರೋಕೆಮಿಕಲ್ ಸಂಕೀರ್ಣದ ಮೇಲೆ ಇಸ್ರೇಲ್ ಭೀಕರ ದಾಳಿ.

ಟೆಲ್ ಅವಿವ್/ಟೆಹ್ರಾನ್ : ಇರಾನ್‌ನ ಅತಿದೊಡ್ಡ ಪೆಟ್ರೋಕೆಮಿಕಲ್ ಸಂಕೀರ್ಣದ ಮೇಲೆ ಇಸ್ರೇಲ್ ಭೀಕರ ದಾಳಿ.

ಟೆಲ್ ಅವಿವ್/ಟೆಹ್ರಾನ್ : ಗುಪ್ತಚರ ಮುಖ್ಯಸ್ಥನ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಹೈಫಾ ನಗರದ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ನ ಅತಿದೊಡ್ಡ ಪೆಟ್ರೋಕೆಮಿಕಲ್ ಸಂಕೀರ್ಣದ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ. ಇರಾನ್‌ನ ದಕ್ಷಿಣ ಭಾಗದ ಬುಶೆಹರ್ ಪ್ರಾಂತ್ಯದಲ್ಲಿರುವ ಪೆಟ್ರೋಕೆಮಿಕಲ್ ಕೇಂದ್ರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಹೇಳಿದ್ದಾರೆ.

ಇರಾನ್‌ನ ಶೇ.೫೦ರಷ್ಟು ಪೆಟ್ರೋಕೆಮಿಕಲ್ ಉತ್ಪಾದನೆಯನ್ನು ಈ ಒಂದೇ ಕೇಂದ್ರ ಹೊಂದಿತ್ತು. ಕಳೆದ ವಾರವಷ್ಟೇ ಇಸ್ರೇಲ್ ಮತ್ತೊಂದು ಪ್ರಮುಖ ಘಟಕದ ಮೇಲೆ ದಾಳಿ ಮಾಡಿತ್ತು. ಈ ದಾಳಿಯಿಂದಾಗಿ ಇರಾನ್‌ನ ಸುಮಾರು ಶೇ.೮೫ರಷ್ಟು ರಫ್ತು ಸಾಮರ್ಥ್ಯ ಸ್ಥಗಿತಗೊಂಡAತಾಗಿದೆ ಎಂದು ವರದಿಯಾಗಿದೆ. ಅಸಲುಯೆ ಪೆಟ್ರೋಕೆಮಿಕಲ್ ಸಂಕೀರ್ಣದಲ್ಲಿ ಭಾರಿ ಸ್ಫೋಟಗೊಂಡಿದ್ದು ವಿದ್ಯುತ್, ನೀರಿನ ಸರಬರಾಜು ಕಡಿತಗೊಂಡಿವೆ ಎಂದು ಇರಾನ್ ಹೇಳಿದೆ. ಅಲ್ಲದೇ ಇದರಿಂದ ಭಾರಿ ಪ್ರಮಾಣದ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮಾತನಾಡಿರುವ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್, ಇರಾನ್ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಬಳಸುತ್ತಿದ್ದ ಪ್ರಮುಖ ಮೂಲವನ್ನೇ ಈಗ ನಾಶಪಡಿಸಿದ್ದೇವೆ. ಇಸ್ರೇಲ್ ನಾಗರಿಕರ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದರೆ, ಇರಾನ್ ಮೇಲೆ ಇನ್ನೂ ಭೀಕರ ದಾಳಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಸೇಲ್‌ನ ೨೦ ಕಡೆ ಇರಾನ್ ದಾಳಿ ಇಸ್ರೇಲ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿ ೨೦ಕ್ಕೂ ಹೆಚ್ಚು ಕಡೆಗಳಲ್ಲಿ ಇರಾನ್ ಸರಣಿ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ಹೈಫಾ ನಗರದ ವಸತಿ ಸಂಕೀರ್ಣಕ್ಕೆ ಅಪ್ಪಳಿಸಿದ್ದು, ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನ ಉತ್ತರದಿಂದ-ದಕ್ಷಿಣದವರೆಗೂ ೨೦ ಸ್ಥಳಗಳ ಮೇಲೆ ಕ್ಲಸ್ಟರ್ ಕ್ಷಿಪಣಿಗಳು ಬಿದ್ದಿವೆ. ಇದರ ಪರಿಣಾಮ ಐಷಾರಾಮಿ ಕಾರು, ಕಟ್ಟಡಗಳು ಧಗಧಗಿಸಿವೆ.

ಹೋರ್ಮುಜ್ ಓಪನ್ ಮಾಡುವಂತೆ ಅಮೆರಿಕದ ಅಧ್ಯಕ್ಷ ಟ್ರಂಪ್ ಇರಾನ್‌ಗೆ ಧಮ್ಕಿ ಹಾಕಿದ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಭೀಕರ ಜಂಟಿ
ದಾಳಿ ನಡೆಸಿವೆ. ಸೋಮವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಐಆರ್‌ಜಿಸಿ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ಸಯ್ಯದ್ ಮಜಿದ್ ಖಾದೇಮಿ ಹತರಾಗಿದ್ದಾರೆ. ಟೆಹ್ರಾನ್ ಸೇರಿದಂತೆ ಹಲವು ಭಾಗಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಟೆಹ್ರಾನ್‌ನ ಷರೀಫ್ ಯುನಿವರ್ಸಿಟಿ ಗುರಿಯಾಗಿಸಿ ದಾಳಿ ಮಾಡಲಾಗಿದ್ದು, ಈ ದಾಳಿಯಲ್ಲಿ ಐಆರ್‌ಜಿಸಿ ಗುಪ್ತಚರ ಮುಖ್ಯಸ್ಥ ಖಾದೇಮಿ ಹತರಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಈ ಬೆನ್ನಲ್ಲೇ ಇರಾನ್ ಸಹ ಖಾದೇಮಿ ಸಾವು ದೃಢಪಡಿಸಿದೆ. ಈ ಬಗ್ಗೆ ಮಾತನಾಡಿದ ಇಸ್ರೇಲ್ ರಕ್ಷಣಾ ಸಚಿವ, ಭಯೋತ್ಪಾದಕ ನಾಯಕರನ್ನು ಒಬ್ಬೊಬ್ಬರನ್ನಾಗಿ ಕೊಲ್ಲುತ್ತೇವೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular