ಚೆನ್ನೆ : ವಿಶ್ವಕಪ್ ಕ್ರಿಕೆಟ್‌ನಲ್ಲಿ ಆತಿಥೇಯ ಭಾರತ ಶುಭಾರಂಭ ಮಾಡಿದೆ.ಅದು ಆರಂಭಿಕ ಪಂದ್ಯದಲ್ಲಿ ಪ್ರಬಲ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ೬ವಿಕೆಟ್‌ಗಳಿಂದ ಸದೆ ಬಡಿಯಿತು. ಇಲ್ಲಿನ ಚಿದಂಬರ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡವು ಕಾಂಗರೂಗಳನ್ನು ಕಡಿಮೆ ಸ್ಕೋರಿಗೆ ಕಟ್ಟಿ ಹಾಕಿ ಅನಂತರ ಸುಲಭವಾಗಿ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಭಾರತೀಯ ಬೌಲರ್‌ಗಳ ಬಿಗಿ ದಾಳಿಯಿಂದ ೪೯.೩ ಓವರ್‌ಗಳಲ್ಲಿ ೧೯೯ ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ರವೀಂದ್ರ ಜಡೇಜಾ ಅವರು ೨೮ ರನ್‌ಗೆ ೩ ವಿಕೆಟ್ ಪಡೆದರು.
೨೦೦ ರನ್‌ಗಳ ಸವಾಲು ಬೆನ್ನಟ್ಟಿದ ಭಾರತ ಆರಂಭದಲ್ಲಿ ಕೇವಲ ೨ ರನ್‌ಗೆ ೩ ವಿಕೆಟ್ಕ ಳೆದುಕೊಂಡು ದುಸ್ಥಿತಿಯಲ್ಲಿತ್ತು. ಆದರೆ ಅನಂತರ ಜತೆಗೂಡಿದ ವಿರಾಟ್ ಕೊಹ್ಲಿ(೮೫) ಹಾಗೂ ಕೆ.ಎಲ್ರಾ ಹುಲ್ (೯೭) ತಲಾ ಅರ್ಧ ಶತಕ ಗಳಿಸಿ, ಇನ್ನೂ ೫೨ ಎಸೆತಗಳು ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು. ರಾಹುಲ್ ಅವರು ಶತಕ ವಂಚಿತರಾದರೂ ಕೊನೆಯ ಎಸೆತದಲ್ಲಿ ಸಿಕ್ಸರ್ ಮೂಲಕ ಜಯ ತಂದಿತ್ತರು.
ಸ್ಕೋರ್: ಆಸ್ಟೆçÃಲಿಯಾ:
೧೯೯/೧೦ (೪೯.೩ ಓವರ್)
ಭಾರತ: ೨೦೧/೪ (೪೧.೨)