ಚೆನೈ ; ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನಲ್ಲಿ ಜನಪ್ರಿಯ ನಟ ರಾಜಕಾರಣಿಯ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 38 ಜನರು ಸಾವನ್ನಪ್ಪಿದ್ದು ಸುಮರು 40ಕ್ಕೂ ಹೆಚ್ಷು ಜನರುವ ಗಾಯಗೊಂಡಿದ್ದಾರೆಂದು ರಾಜ್ಯದ ಆರೋಗ್ಯ ಸಚಿವರು ಶನಿವಾರ ತಡರಾತ್ರಿ ತಿಳಿಸಿದ್ದಾರೆ.




ಸಚಿವ ಮಾ ಸುಬ್ರಮಣಿಯನ್, ಮಾಧ್ಯಮಗಳಿಗೆ ತಿಳಿಸಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಹಲವರು ಸಾವನ್ನಪ್ಪಿದ್ದರು. ಗಾಯಾಳುಗಳು ಸ್ಥಿರವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.ಮೃತರಲ್ಲಿ ಎಂಟು ಮಕ್ಕಳು ಸೇರಿದ್ದಾರೆ ಎಂದು ಸುಬ್ರಮಣಿಯನ್ ಹೇಳಿದರು.
ತಮಿಳುನಾಡಿನ ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರಾದ ಕರೂರ್ ಜಿಲ್ಲೆಯ ರಾಜಕಾರಣಿ ವಿಜಯ್ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ ವಿಜಯ್ ಅವರ ಬಸ್ ಹತ್ತಿರ ಹೋಗಲು ಪ್ರಯತ್ನಿಸುವಾಗ ಅವರ ಬೆಂಬಲಿಗರು ಮತ್ತು ಅಭಿಮಾನಿಗಳ ಗುಂಪೊಂದು ಬಿದ್ದಾಗ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿವೆ.