Sunday, March 15, 2026
Flats for sale
Homeರಾಜ್ಯಚಿತ್ರದುರ್ಗ : ಮಹಿಳೆಯ ಮೇಲೆ ಕರಡಿಗಳಿಂದ ದಾಳಿ ತಲೆಗೆ ಗಾಯ,ಗ್ರಾಮಸ್ಥರಲ್ಲಿ ಭೀತಿ.

ಚಿತ್ರದುರ್ಗ : ಮಹಿಳೆಯ ಮೇಲೆ ಕರಡಿಗಳಿಂದ ದಾಳಿ ತಲೆಗೆ ಗಾಯ,ಗ್ರಾಮಸ್ಥರಲ್ಲಿ ಭೀತಿ.

ಚಿತ್ರದುರ್ಗ : ಬೆಳ್ಳಂ ಬೆಳಗ್ಗೆ ಗ್ರಾಮದೊಳಗೆ ಕರಡಿಗಳ ಪ್ರವೇಶ ಮಹಿಳೆ ಮೇಲೆ ದಾಳಿ ಗ್ರಾಮಸ್ಥರಲ್ಲಿ ಆತಂಕ ಸುವುವಾಗಿದೆ . ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿ ಗ್ರಾಮಕ್ಕೆ ಭಾನುವಾರ ಬೆಳ್ಳಂ ಬೆಳಗ್ಗೆ ಮೂರು ಕರಡಿಗಳ ಪ್ರವೇಶ ಮಾಡಿದ್ದು ಮಂಜಮ್ಮ ಎರ್ರಿಸ್ವಾಮಿ ಎಂಬ ಗೃಹಿಣಿಯ ಮೇಲೆ ಕರಡಿ ದಾಳಿ ನಡೆಸಿದ್ದು ತಲೆಗೆ ಗಾಯಗೊಳಿಸಿದ್ದರಿಂದ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಡಖಲು ಮಾಡಲಾಗಿದೆ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ

ಒಟ್ಟಾರೆ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಕರಡಿಗಳ ಓಡಾಟದಿಂದ ಗ್ರಾಮಸ್ಥರಲ್ಲಿ ಭೀತಿ ಎದುರಾಗಿದೆ.ಘಟನ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ತಹಶೀಲ್ದಾರ್ ರೇಹಾನ್ ಪಾಷ ಪಿಎಸ್ಐ ಲೋಕೇಶ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡಲೆ ಕರಡಿಗಳನ್ನು ಅರಣ್ಯಕ್ಕೆ ಓಡಿಸಲು ಹಾಗೂ ಅವುಗಳನ್ನು ಎರೆಯಿಡಿಯಲು ಬೋನ್ ವ್ಯವಸ್ಥೆ ಮಾಡಿ ಜೀವಂತ ಕರಡಿಗಳನ್ನು ಸೆರೆಯಿಡಿದು ದೂರದ ಅರಣ್ಯಕ್ಕೆ ಸಾಗಿಸುವ ಮೂಲಕ‌ ಗ್ರಾಮಸ್ಥರಲ್ಲಿ ಭಯದ ವಾತಾವರಣ ಹೋಗಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಸ್ಥಳಕ್ಕೆ ಅರಣ್ಯಾಧಿಕಾರಿ ಬಹುಗುಣ ಹೋಗಲಿದ್ದಾರೆ. ತಳಕು ಪಿಎಸ್ ಐ ಭೇಟಿ ನೀಡಿದ್ದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular