ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಮ್ಮತ್ ಮರಿಕುಂಟೆ ಗ್ರಾಮದಲ್ಲಿ ರೈತನೊಬ್ಬ ಕರ್ಬುಜ ಹಣ್ಣನ್ನು ಬೆಳೆದಿದ್ದಾನೆ. ಆದರೆ ಫಸಲು ಕೈ ಸೇರಬೇಕು ಅನ್ನುವಷ್ಟರಲ್ಲಿ, ಕರ್ಬುಜ ಹಣ್ಣುಗಳು ಹೊಸ ಬಗೆಯ ರೋಗಕ್ಕೆ ತುತ್ತಾಗಿ ಹಣ್ಣುಗಳು ಹಾಳಾಗುತ್ತಿದ್ದು ಆಗಿ ಹೋಗುತ್ತಿದ್ದು. ಇದರಿಂದ ಒಂದು ಹಣ್ಣನ್ನು ಸಹ ಮಾರಾಟ ಮಾಡದೆ ಕರ್ಬುಜ ಬೆಳೆಯನ್ನು ನಾಶಪಡಿಸಲು ರೈತ ಮುಂದಾಗಿದ್ದಾನೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಯಲಾಗಿದ್ದ ಕರಿಬೂಜ ಬೆಳೆ ಕೈ ಕೊಟ್ಟಿದ್ದು ಬೆಳೆಗಾರ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.ಬರಗಾಲ ಹಾಗೂ ಬಿಸಿಲ ಬೇಗೆಗೆ ಹಾಗೂ ಹವಾಮಾನ ವೈಪರೀತ್ಯದಿಂದ ಕೈಕೊಟ್ಟ ಮುಂಗಾರಿನಿಂದ ಈ ಸಮಸ್ಯೆ ಉಂಟಾಗಿದೆಂದು ಪರಿಣಿತರು ತಿಳಿಸಿದ್ದಾರೆ.
ಆದರೆ ಸರಕಾರ ಇದರ ಬಗ್ಗೆ ಸಮಗ್ರ ತನಿಖೆ ನಡಿಸಿ ಲಕ್ಷಾಂತರ ರೂಪಾಯಿಯನ್ನು ತಮ್ಮ ಜಮೀನಿಗೆ ಹಾಕಿ ಏನು ಸಿಗದೇ ಏಲ್ಲಾ ಬೆಳೆಯನ್ನು ಕಳೆದುಕೊಂಡು ಆತ್ಮಹತ್ಯೆ ಮಾಡುವ ರೈತರಿಗೆ ಸಮಾಧಾನ ಪಡಿಸಬೇಕೆಂಬುದು ರೈತನ ಮಾತು .