ಚಿತ್ರದುರ್ಗ : ಕೋಟೆ ನಾಡು ದುರ್ಗದಲ್ಲಿ ಕಾಮುಕ ಶಿಕ್ಷಕನ ಕರ್ಮಕಾಂಡ ಬೆಳಕಿಗೆ ಬಂದಿದೆ.ಪ್ರಭಾವಿ ಮಠದ ಅಧೀನದಲ್ಲಿರುವ ವಿಧ್ಯಾಸಂಸ್ಥೆಯ ಶಿಕ್ಷಕನಿಂದ ೬ ಜನ ಅಪ್ರಾಪ್ತ ವಿಧ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ತಾಲ್ಲೂಕು ಖಾಸಗಿ ಪ್ರೌಢ ಶಾಲಾ ಶಿಕ್ಷಕ ರಂಗಣ್ಣ ಎಂಬುವನಿಂದ ಕೃತ್ಯ ನಡೆದಿದ್ದು ವಿಧ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ಶಿಕ್ಷಕ ನೀಡಿದ್ದಾನೆ. 10ನೇ ಕ್ಲಾಸ್ ಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಕಾಮಾಂದ ಟೀಚರ್ ವಿರುದ್ಧ ದೂರು ದಾಖಲಾಗಿದ್ದು ಈ 420 ಮೇಷ್ಟ್ರು ಬಾಲಕಿಯರ ಖಾಸಗಿ ಅಂಗಾಗ ಮುಟ್ಟಿ,ಮುತ್ತಿಟ್ಟು, ಅಪ್ಪಿಕೊಳ್ತಿದ್ದನೆಂದು ಕಾಮುಕ ಶಿಕ್ಷಕನ ಕಳ್ಳಾಟಕ್ಕೆ ರೋಸಿ ಮುಖ್ಯ ಶಿಕ್ಷಕರ ಗಮನಕ್ಕೆ ಬಾಲಕಿಯರು ತಂದಿದ್ದಾರೆ.
ಮುಖ್ಯ ಶಿಕ್ಷಕರು ಮಕ್ಕಳ ದೂರನ್ನು ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದು ಕಳೆದ 1 ವರ್ಷದಿಂದ ಮಕ್ಕಳು ಶಿಕ್ಷಕನ ಲೈಂಗಿಕ ದೌರ್ಜನ್ಯಕ್ಕೆ ಬೇಸತ್ತಿದ್ದಾರೆ. ಟೀಚರ್ ರಂಗಣ್ಣನ ಕಾಮಕಾಂಡ ತಿಳಿಯುತ್ತಿದ್ದಂತೆ ಭರಮಸಾಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ವಿಧ್ಯಾಸಂಸ್ಥೆಯ ವಾಮದೇವಪ್ಪ ಎಂಬುವವರಿಂದ ದೂರು ದಾಖಲಾಗಿದೆ.ಭರಮಸಾಗರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದ್ದು ಕೇಸ್ ದಾಖಲಾಗುತ್ತಿದ್ದಂತೆ ಕಾಮುಕ ಶಿಕ್ಷಕ ಎಸ್ಕೇಪ್ ಆಗಿದ್ದಾನೆ.ಆರೋಪಿ ಶಿಕ್ಷಕ ಎಂ.ರಂಗಣ್ಣನ ಪತ್ತೆಗೆ ಬಲೆ ಬೀಸಿ ಪೊಲೀಸರು ಬಂಧಿಸಿದ್ದು DYSP ದಿನಕರ್ ನೇತೃತ್ವದಲ್ಲಿ ಪೋಕ್ಸೋ ಪ್ರಕರಣ ತನಿಖೆ ನಡೆಯುತ್ತಿದೆ.


