ಚಿತ್ರದುರ್ಗ : ಮೂರು ದಿನಗಳ ಚಿತ್ರದುರ್ಗ ಜಿಲ್ಲಾ ಪ್ರವಾಸದಲ್ಲಿರುವ ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಚಿತ್ರದುರ್ಗ RTO ಕಚೇರಿಗೆ ಭೇಟಿ ನೀಡಿದರು ಅಸಮರ್ಪಕ ಕಾರ್ಯ ನಿರ್ವಹಣೆ ಹಿನ್ನೆಲೆ RTO ಮೇಲೆ ಸುಮೋಟೊ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಕಚೇರಿ ಮುಂಭಾಗ ಹಳೆಯ ವಾಹನಗಳು ನಿಂತಿದ್ದು, ಅವುಗಳನ್ನು ಸಮರ್ಪಕ ವಿಲೇವಾರಿ ಮಾಡದ ಹಿನ್ನೆಲೆ RTO ಭರತ್ ಕಾಳಸಿಂಗೆ ರನ್ನ ಉಪ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಸಿಬ್ಬಂದಿ ರಜಿಸ್ಟರ್ ನಲ್ಲಿ ಸರಿಯಾಗಿ ಹಣ ಕಾಸಿನ ಮಾಹಿತಿ ಹಾಗೂ ಸಹಿ ಮಾಡದ ಹಿನ್ನೆಲೆ ಸಿಬ್ಬಂದಿಗಳನ್ನು ಸಾಲಾಗಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದು ವಾಹನ ಸಾವರರ ಲೈಸೆನ್ಸ್ ನೀಡುವ, ಆರ್.ಸಿ, ಬುಕ್, ವಾಹನಗಳ ಎಫ್.ಸಿ, ಕುರಿತಂತೆ ಪ್ರಶ್ನೆಗೆ ಉತ್ತರಿಸದ RTO ಹಾಗೂ ಸಿಬ್ಬಂದಿ ವಿರುದ್ಧ ಗರಂ ಆಗಿದ್ದಾರೆ. ಕೆ.ಎನ್. ಫಣೀಂದ್ರ RTO ಎ ಮೇಲೆ ಸುಮೋಟೊ ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಲೋಕಾಯುಕ್ತ ಎಸ್ಪಿ ವಾಸುದೇವರಾವ್ ರವರಿಗೆ ಸೂಚನೆ ನೀಡಿದ್ದಾರೆ.