ಚಿಕ್ಕೋಡಿ : ಅಥಣಿಯಲ್ಲಿ ಹಾಡುಹಗಲೇ ಇಬ್ಬರೂ ಮಕ್ಕಳ ಕಿಡ್ನ್ಯಾಪ್ ಪ್ರಕರಣ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮಕೋಹಳ್ಳಿ ಗ್ರಾಮದ ಹೊರವಲಯದಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.
ಹಾಡು ಹಗಲೇ ಆರೋಪಿಗಳು ಇಬ್ಬರು ಮಕ್ಕಳನ್ನು ಕಿಡ್ನ್ಯಾಪ್ ಮಾಡಿದ ಸುದ್ದಿ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಇಬ್ಬರು ಮಕ್ಕಳ ಕಿಡ್ನ್ಯಾಪ್ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದ್ದು ಕೋಹಳ್ಳಿ ಸಿಂಧೂರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುವಾಗ ಪೊಲೀಸರು ತಡೆದು ಎದೆಮೂರಿಕಟ್ಟಿದ್ದಾರೆ.
ಆರೋಪಿಗಳನ್ನು ಸಂಭಾಜಿ, ರವಿಕಿರಣ್ ಕಮಲಾಕರ, ಶಾರುಖ್ ಶೇಖ್ ಎಂದು ಗುರುತಿಸಲಾಗಿದೆ.
ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದರವರು ಮೂರು ವಿಶೇಷ ತಂಡಗಳನ್ನ ರಚನೆ ಮಾಡಿದ್ದು ಪೊಲೀಸರು ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಪೊಲೀಸರ ಮೇಲೆಯೇ ಕಿಡ್ನ್ಯಾಪರ್ಸಗಳು ಹಲ್ಲೆನಡೆಸಿದ ಹಿನ್ನೆಲೆ ಆತ್ಮರಕ್ಷಣೆಗಾಗಿ ಕಿಡ್ನ್ಯಾಪರ್ಸ್ಗಳ ಕಾಲಿಗೆ ಪಿ.ಎಸ.ಐ ಉಪ್ಪಾರರವರು ಆರೋಪಿ ಸಂಭಾಜಿ ಕಾಂಬಳೆ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಸಂಭಾಜಿಗೆ ಸಾಥ್ ಕೊಟ್ಟ ಮೂವರನ್ನು ವಶಕ್ಕೆ ಪಡೆದಿದ್ದು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.