ಚಿಕ್ಕೊಡಿ ; ಡಿಸಿಸಿ ಬ್ಯಾಂಕ್ ಲೇಬರ್ ಯೂನಿಯನ್ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರನ್ನು ಇಂದು ಮಧ್ಯಾಹ್ನ 12 ಗಂಟೆಗೆ ನಿನ್ನ ಜತೆ ಮಾತನಾಡೋದಿದೆ ಮನೆಗೆ ಬಾ ಎಂದು ಕರೆದು ಹಲ್ಲೆ ಏಕಾಏಕಿ ಹಲ್ಲೆ ಮಾಡಿದ್ದಾರೆಂದು ನಿಂಗಪ್ಪರವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ವಿರುದ್ಧ ಗಂಭೀರ ಅರೋಪ ಮಾಡಿದ್ದಾರೆ.
ತಲೆ ಒಡೆಯುವಂತೆ ಹೊಡೆದಿದ್ದು ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಆಧ್ಯಕ್ಷ ನಿಂಗಪ್ಪ.ನಿಂಗಪ್ಪನನ್ನು ಚಿಕಿತ್ಸೆಗೆಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣದ ತನಿಖೆಗೆ ಅಗ್ರಹಿಸಿದ್ದಾರೆ.


