ಚಿಕ್ಕೋಡಿ: ಪ್ರಯಾಣದ ವೆಚ್ಚ ವನ್ನು ಅವರವರೇ ಬರಿಸಿದರೆ ಇಂತಹ ಸಮಸ್ಯೆ ಬರುವುದಿಲ್ಲ ,ಬಿಟ್ಟಿ ಭಾಗ್ಯಗಳ ಪರಿಣಾಮವೇ ಇದು.ರಾಜ್ಯ ಸರಕಾರ ಮಹಿಳೆಯರಿಗಾಗಿ ಬಸ್‌ನಲ್ಲಿ ಉಚಿತ ಪ್ರಯಾಣ ಭಾಗ್ಯ ನೀಡಿದೆ. ಬಸ್‌ಗಳೆಲ್ಲ ಮಹಿಳೆಯರಿಂದಲೇ ತುಂಬಿ ತುಳುಕುವಂತಾಗಿದೆ.ಪ್ರವಾಸಿ ತಾಣಗಳೆಲ್ಲ ನಾರಿಯರಿಂದ ಕಿಕ್ಕಿರಿದಿದೆ.
ಪ್ರಸ್ತುತ ಸಮಯದಲ್ಲಿ ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಪ್ರಯಾಣ ಮಾಡುತ್ತಿರುವುದರಿಂದ ಪ್ರತಿನಿತ್ಯ ಸೀಟಿಗಾಗಿ ಜಡೆ ಜಗಳ ನಡೆಯುತ್ತಲೇ ಇದೆ. ಈ ಹಿಂದೆ ಸಹ ಬಸ್‌ನಲ್ಲಿ ಸೀಟಿಗಾಗಿ ಮಹಿಳೆಯರು ಜಡೆ ಹಿಡಿದು ಹೊಡೆದಾಡಿದ್ದಾರೆ. ಇದೀಗ ಮತ್ತೆ ಅಂತಹದ್ದೇ ಒಂದು ಘಟನೆ ನಡೆದಿದೆ.
ಎಲ್ಲರೂ ಇರುವಾಗ ಜಡೆ ಹಿಡಿದು ಸರ್ಕಾರಿ ಬಸ್‌ನಲ್ಲಿ ಮಹಿಳೆಯರು ಬಡಿದಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ-ಬೆಳಗಾವಿ ಮಾರ್ಗದ ಬಸ್‌ನಲ್ಲಿ ಘಟನೆ ನಡೆದಿದೆ. ಸೀಟಿಗಾಗಿ ಇಬ್ಬರು ಮಹಿಳೆಯರ ಮಧ್ಯದಲ್ಲಿ ಗಲಾಟೆ ನಡೆದಿದೆ. ಕಿತ್ತಾಟ ವಿಕೋಪಕ್ಕೆ ಹೋಗಿದೆ. ಇಬ್ಬರೂ ಒಬ್ಬರಿಗೊಬ್ಬರು ಸೀಟು ಬಿಟ್ಟುಕೊಡಲು ತಯಾರಿಲ್ಲ, ನಂತರ ತಮ್ಮ ಕಾಲಿನ ಚಪ್ಪಲಿ ತೆಗೆದುಕೊಂಡು ಇಬ್ಬರೂ ಹೊಡೆದಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಇಂತಹ ಕಿರಿಕ್ ನಡೆಯುವಾಗ ಈ ವೇಳೆ ಮಧ್ಯಪ್ರವೇಶಿಸಿದ ಓರ್ವ ಪುರುಷ ಪ್ರಯಾಣಿಕ ಚಪ್ಪಲಿಯಿಂದ ಹೊಡೆದ ಮಹಿಳೆಯ ಬೆನ್ನಿಗೆ ಹೊಡೆದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾನೆ. ಚಪ್ಪಲಿಯೇಟು ತಿಂದ ಮಹಿಳೆ ಬೊಬ್ಬೆ ಹಾಕಿ ಕಣ್ಣೀರು ಹಾಕಿದರು. ಒಟ್ಟಾರೆ ಪುಕ್ಕಟೆ ಬಸ್ ಭಾಗ್ಯ ನಾನಾ ರೀತಿಯ ಅವಘಡಕ್ಕೆ ಕಾರಣವಾಗಿದೆ.


