ಚಿಕ್ಕೋಡಿ : ಘಟಪ್ರಭಾ ನದಿಯಲ್ಲಿ ಸುಮಾರು 10 ರಿಂದ 12 ಅಡಿ ಉದ್ದದ ಮೊಸಳೆ ಪ್ರತ್ಯಕ್ಷವಾಗಿದ್ದು ಸ್ಥಳೀಯರು ಕಂಡು ಬೆಚ್ಚಿಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದ ಹೊರವಲಯದ ನದಿಯಲ್ಲಿ ಬೇಸಿಗೆ ಹಿನ್ನೆಲೆ ನದಿ ನೀರು ಕಡಿಮೆ ಹಿನ್ನೆಲೆ ನದಿ ತೀರದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ.
ಬಾಯಿ ತೆರೆದು ಕುಳಿತಿರುವ ಮೊಸಳೆ ನೋಡಿ ಗುಡಸ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು,ಭಯದಿಂದ ನದಿ ತೀರದಲ್ಲಿರುವ ಜಮೀನುಗಳಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಮೊಸಳೆ ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ ಮಾಡಿದ್ದಾರೆ.


