ಚಿಕ್ಕಮಗಳೂರು : ಪ್ರವಾಸಿ ತಾಣವೆಂದರೆ ಪ್ರವಾಸಿಗರು ಬರ್ತಾರೆ ಹೋಗ್ತಾರೆ ಆದರೆ ಬೆಟ್ಟದ ಮೇಲೆ ಕಾರನ್ನು ನಿಲ್ಲಿಸಿ ಕುಡಿದು ಬಾಟಲಿ ,ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಎಲ್ಲಿಬೇಕೆಂದರೆ ಅಲ್ಲಿ ಎಸೆದು ಬೆಟ್ಟದ ಸೌಂದರ್ಯವನ್ನು ಹಾಳುಮಾಡುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ.
ವೀಕೆಂಡ್ ಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಅವರು ಬಂದು ಹೋಗುವುದರಿಂದ ಸಮಸ್ಯೆ ಯಾರಿಗೂ ಇಲ್ಲ; ಅದರೆ ಅವರು ಕಾರು ಮತ್ತು ಬೈಕ್ಗಳಲ್ಲಿ ತಮ್ಮೊಂದಿಗೆ ಹೊತ್ತು ತರುವ ಮದ್ಯದ ಬಾಟಲಿ, ತಿಂಡಿ ಪೊಟ್ಟಣ, ಪ್ಲಾಸ್ಟಿಕ್ ಚೀಲಗಳು ಮತ್ತು ಸಿಗರೇಟು ಪ್ಯಾಕ್ ಗಳ ಬಗ್ಗೆ ಸ್ಥಳೀಯರಿಗೆ ಖಂಡಿತವಾಗಿಯೂ ಅಭ್ಯಂತರ ಆಕ್ಷೇಪಣೆಗಳಿವೆ. ಅವರು ಜಿಲ್ಲಾ ಪೊಲೀಸ್ ಗೆ ಸಲ್ಲಿಸಿರುವ ದೂರಿನ ಪ್ರಕಾರ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮುಳ್ಳಯ್ಯನಗಿರಿ ಮತ್ತು ದತ್ತ ಪೀಠಕ್ಕೆ ಬರುವ ಜನ ಪರಿಸರವನ್ನು ಹೊಲಸೆಬ್ಬಿಸುತ್ತಿದ್ದಾರೆ.
ಈ ಭಾಗಕ್ಕೆ ಜನ ಮದ್ಯದ ಬಾಟಲಿ ಮತ್ತು ಇತರ ವಸ್ತುಗಳನ್ನು ಒಯ್ಯದಂತೆ ತಡೆಯಲು ಚಂದ್ರದ್ರೋಣ ಪರ್ವತದ ಕೈಮರ ಚೆಕ್ ಪೋಸ್ಟ್ ಬಳಿ ಪೊಲೀಸರು ಪ್ರವಾಸಿಗರ ವಾಹನಗಳ ತಪಾಸಣೆ ನಡೆಸುತ್ತಿದಿದ್ದಾರೆ. ಕಾರು ಮತ್ತು ರೂಮುಗಳಲ್ಲಿದ್ದ ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು ತಿಳಿದುಬಂದಿದೆ ಒಟ್ಟಿನಲ್ಲಿ ತಂಪನೆಯ ಚಳಿಗೆ ಬಿಸಿಹಾಗಿಸಲು ಕೊಂಡುಹೋದ ಬಾಟಲಿಗಳು ಪೋಲೀಸರ ಪಾಲಾಗುತ್ತಿರುವುದು ವಿಪರ್ಯಾಸ.