Thursday, March 12, 2026
Flats for sale
Homeರಾಜ್ಯಚಿಕ್ಕಮಗಳೂರು : ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುತ್ತಿರುವ ಇಟಿಎಫ್ ಸಿಬ್ಬಂದಿಗಳಿಗೆ ಸಂಬಳ ನೀಡದ ಸರ್ಕಾರ,ಸಂಕಷ್ಟದಲ್ಲಿ ಊಟಕ್ಕೆ...

ಚಿಕ್ಕಮಗಳೂರು : ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುತ್ತಿರುವ ಇಟಿಎಫ್ ಸಿಬ್ಬಂದಿಗಳಿಗೆ ಸಂಬಳ ನೀಡದ ಸರ್ಕಾರ,ಸಂಕಷ್ಟದಲ್ಲಿ ಊಟಕ್ಕೆ ಹಣವಿಲ್ಲದೆ ಪರದಾಟ ..!

ಚಿಕ್ಕಮಗಳೂರು : ಇಡೀ ರಾಜ್ಯ ದಸರಾ ಸಂಭ್ರಮ ಆಚರಿಸುತ್ತಿದೆ ಆದರೆ ಚಿಕ್ಕಮಗಳೂರಿನಲ್ಲಿ ಇಟಿಎಫ್ಸಿ ಬ್ಬಂದಿಗೆ ಸಂಬಳ ನೀಡುವುದನ್ನೇ ರಾಜ್ಯ ಸರ್ಕಾರ ಮರೆತಿದೆ. ಸಂಬಳ, ಊಟವೂ ಇಲ್ಲದೆ ಇಟಿಎಫ್ ಸಿಬ್ಬಂದಿ ಕಾಡಾನೆಗಳನ್ನು ಕಾಯುತ್ತಿದ್ದಾರೆ. ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುತ್ತಿರುವ ಇಟಿಎಫ್ ಸಿಬ್ಬಂದಿಗೆ ಸಂಬಳ, ಊಟದ ಹಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿಲ್ಲವೆಂದು ತಿಳಿದುಬಂದಿದೆ.

ಅರಣ್ಯ ಇಲಾಖೆ ಸಿಬ್ಬಂದಿಗೆ ಆಗಸ್ಟ್ ವರೆಗೆ ಊಟದ ಭತ್ಯೆ, ಸಂಬಳ ನೀಡಿದೆ. ಆದರೆ ಕಾಂಗ್ರೆಸ್ ಸರ್ಕಾರ 2 ತಿಂಗಳಿನಿAದ ಸಂಬಳ, ಊಟ, ಭತ್ಯೆ ನೀಡಿಲ್ಲ. ಸರ್ಕಾರದಿಂದ ಹಣ ಬಾರದ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸಂಬಳ ನೀಡಿಲ್ಲ. ಕಾಡಾನೆಗಳ ಉಪಟಳ ಹೆಚ್ಚುತ್ತಿದ್ದಂತೆ ಸರ್ಕಾರ ಇಟಿಎಫ್ ಪಡೆ ರಚಿಸಿತ್ತು. ಮಾನವ, ಕಾಡಾನೆಗಳ ಸಂಘರ್ಷ ತಡೆಯಲು ಸರ್ಕಾರ ಪಡೆ ರಚಿಸಿತ್ತು. ಕಾಡಾನೆಗಳು ನಾಡಿಗೆ ಬಾರದಂತೆ ಕೆಲಸ ಮಾಡುವ ಸಿಬ್ಬಂದಿ ಈಗ ಪರದಾಡುತ್ತಿದ್ದಾರೆ.

ಹಗಲುರಾತ್ರಿ ಕಾಡಾನೆಗಳನ್ನ ಕಾಯುವ ಪಡೆಯನ್ನೇ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಇಟಿಎಫ್ ಸಿಬ್ಬಂದಿಗೆಸಂಬಳ ಊಟದ ಭತ್ಯೆ ನೀಡಲು ಇಲಾಖೆಯೇ ಪರದಾಡುವ ಪರಿಸ್ಥಿತಿ ಇದೆ. ರಾಜ್ಯಾದ್ಯಂತ 7 ಜಿಲ್ಲೆಗಳಲ್ಲಿ ಇಟಿಎಫ್ ಪಡೆ ರಚನೆ ಆಗಿದೆ. ರಾಜ್ಯ ಸರ್ಕಾರ ಸಿಬ್ಬಂದಿಗೆ 3-4 ತಿಂಗಳಿಗೊಮ್ಮೆ ಸಂಬಳ ನೀಡುತ್ತಿದೆ. ದಸರಾ ಪ್ರಯುಕ್ತ ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ ನಡೆದ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮಕ್ಕೆ ಮಳೆ ಕಾಟ ಕೊಟ್ಟಿದೆ. ಮಳೆಯ ನಡುವೆಯೂ ಜನ ಕುರ್ಚಿಯನ್ನ ಕೊಡೆಯನ್ನಾಗಿ ಮಾಡಿಕೊಂಡು ಕಾರ್ಯಕ್ರಮ ವೀಕ್ಷಿಸಿದ್ರು. ಆದ್ರೆ ಅಧಿಕಾರಿಗಳಿಗೆ ಮತ್ತು ಗಣ್ಯರಿಗೆ ಪೆಂಡಾಲ್ ಹಾಕಿದಕ್ಕೆ ಜನ ಕೆರಳಿದ್ದರು. ಜನರಿಗೆ ಪೆಂಡಾಲ್ ವ್ಯವಸ್ಥೆ ಮಾಡಿಲ್ಲ ಅಂತಾ ಪಾಲಿಕೆ ಅಧಿಕಾರಿಗಳು ಮತ್ತು ಪೋಲಿಸರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular