ಚಿಕ್ಕಮಗಳೂರು : ದಿನದಿಂದ ದಿನಕ್ಕೆ ಪ್ರವಾಸಿ ಚಾರಣಿಗರ ಸಂಖ್ಯೆ ಹೆಚ್ಚಾದ ಕಾರಣ ಕಾಫಿನಾಡ ಸುಪ್ರಸಿದ್ದ ಪ್ರವಾಸಿತಾಣ ಎತ್ತಿನಭುಜ ಪ್ರವಾಸಿಗರ ಚಾರಣಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ.
ಮೂಡಿಗೆರೆ ತಾಲೂಕಿನ ಎತ್ತಿನಭುಜ ಪ್ರವಾಸಿ ತಾಣಕ್ಕೆ ಇತ್ತೀಚಿನ ದಿನಗಳ್ಲಲಿ ಪ್ರವಾಸಕ್ಕೆ ಬರುವ ಚಾರಣಿಗರ ಸಂಖ್ಯೆ ಹೆಚ್ಚಾಗಿದ್ದು ಹಾಗೂ ಕಳೆದ 15 ದಿನಗಳಿಂದ ಎತ್ತಿನಭುಜ ಭಾಗದಲ್ಲಿ ಭಾರೀ ಮಳೆ ಸುರಿದ ಕಾರಣ ಅಲ್ಲಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ಅರಣ್ಯ ಇಲಾಖೆ ತಾತ್ಕಾಲಿಕ ಬ್ರೇಕ್ ನೀಡಿದೆ .
ವಿದ್ಯುತ್ ಕಂಬ ಹಾಗೂ ಮರಗಳು ಮುರಿದು ಬಿದ್ದು ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದು , ಪ್ರವಾಸಿಗರು ಫೋಟೋ ತೆಗೆಯುವ ಸಂದರ್ಭದಲ್ಲಿ ಅಪಾಯದ ಸಾಧ್ಯತೆಯೂ ಹೆಚ್ಚಾಗಿದೆ .ಅನಾಹುತ ಸಂಭವಿಸಿದರೆ ತುರ್ತಾಗಿ ಘಟನಾ ಸ್ಥಳಕ್ಕೆ ಹೋಗುವುದು ಕಷ್ಟ-ಸಾಧ್ಯ ಹಾಗೂ ಪ್ರಾಣಹಾನಿ, ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆಯಲಾಗಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ .


