Thursday, July 23, 2026
Homeಕ್ರೈಂಚಿಕ್ಕಬಳ್ಳಾಪುರ : ಪ್ರಿಯತಮೆ ಎದುರೇ ಮಹಿಳೆ ಮೇಲೆ ಅತ್ಯಾಚಾರ ವೆಸಗಿ ಕೊಲೆ : ಇಬ್ಬರು ಪೊಲೀಸ್...

ಚಿಕ್ಕಬಳ್ಳಾಪುರ : ಪ್ರಿಯತಮೆ ಎದುರೇ ಮಹಿಳೆ ಮೇಲೆ ಅತ್ಯಾಚಾರ ವೆಸಗಿ ಕೊಲೆ : ಇಬ್ಬರು ಪೊಲೀಸ್ ವಶಕ್ಕೆ.

ಚಿಕ್ಕಬಳ್ಳಾಪುರ : ಪ್ರಿಯತಮನೋರ್ವ ತನ್ನ ಪ್ರಿಯತಮೆ ಎದುರೇ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ಗೌರಿಬಿದನೂರು ತಾಲ್ಲೂಕಿನ ಕೊನಗಾನಹಳ್ಳಿ ಗ್ರಾಮ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಅಲುಮೇಲಮ್ಮ (40 ವರ್ಷ) ಮಹಿಳೆ‌ಯನ್ನು ಸಂಜೀವಪ್ಪ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಅತ್ಯಾಚಾರಿಗೆ ಆತನ ಪ್ರಿಯತಮೆ ರಾಮಾಂಜಿನಮ್ಮ ಕೂಡ ಸಾಥ್​ ನೀಡಿದ್ದು, ಇಬ್ಬರು ಕೂಡಿ ಕೊಲೆ ಮಾಡಿರುವ ಶಂಕೆ‌ ವ್ಯಕ್ತವಾಗಿದೆ.

ಸಂಜೀವಪ್ಪ ರಾಮಾಂಜಿನಮ್ಮ ನಡುವೆ ಅನೈತಿಕ‌ ಸಂಭಂದವಿದ್ದ ಹಿನ್ನಲೆ ಅಲುಮೇಲಮ್ಮ ಇಬ್ಬರ ಅನೈತಿಕ ಸಂಬಂದಕ್ಕೆ ಅಡ್ಡಿಯಾಗಿದ್ದಳುಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.ಅಲುಮೇಲಮ್ಮ ನಾಲ್ಕು ದಿನಗ ಹಿಂದೆ ಗ್ರಾಮದಿಂದನಾಪತ್ತೆಯಾಗಿದ್ದಳು. ಅತ್ತ ಕೊಲೆ ಮಾಡಿದ ಬಳಿಕ ರಾಮಾಂಜಿನಮ್ಮ ವರ್ತನೆ‌ಯಿಂದ ಗ್ರಾಮಸ್ಥರು ಅನುಮಾನಗೊಂಡಿದ್ದರು. ಕೊನೆಗೆ ಆಕೆಯನ್ನು ವಿಚಾರಿಸಿದ ವೇಳೆ ಅಸಲಿ ಸತ್ಯ ಬಾಯಿಬಿಟ್ಟಿದ್ದಾಳೆ.

ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ದೂರು ದಾಖಲಿಸಿಕೊಂಡ‌ ಕೂಡಲೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular