Thursday, March 12, 2026
Flats for sale
Homeರಾಜ್ಯಚಿಕ್ಕಬಳ್ಳಾಪುರ : ಗೌರಿಬಿದನೂರು ಬಳಿ ಭೀಕರ ಅಪಘಾತ, ಇಬ್ಬರು ಸಾವು,ನಾಲ್ಕು ಜನರಿಗೆ ಗಂಭೀರ ಗಾಯ..!

ಚಿಕ್ಕಬಳ್ಳಾಪುರ : ಗೌರಿಬಿದನೂರು ಬಳಿ ಭೀಕರ ಅಪಘಾತ, ಇಬ್ಬರು ಸಾವು,ನಾಲ್ಕು ಜನರಿಗೆ ಗಂಭೀರ ಗಾಯ..!

ಚಿಕ್ಕಬಳ್ಳಾಪುರ : ಜಿಲ್ಲೆಯ ಗೌರಿಬಿದನೂರು ಬಳಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸಾವನಪ್ಪಿದ್ದು ನಾಲ್ಕು ಜನರಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಸೂರಜ್ 25,ಕಮಲ್ 26, ಮೃತ ದುರ್ದೈವಿಗಳು.

ಆಂದ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಹಿಂದುಪೂರ ಮೂಲದ ಶ್ಯಾಮ್ ಪೈರಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಖಾನಪುರ್ ನಿವಾಸಿಗಳೆಂದು ತಿಳಿದುಬಂದಿದೆ. ಯುವಕರು ಚಲಿಸುತ್ತಿದ್ದ ವೇಳೆ ಇನೋವಾ ಕಾರು ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಗಂಭೀರವಾಗಿ ಗಾಯಗೊಂಡವರನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಚಾಲಕನ ಅಜಾಗರೂಕತೆ ಅತಿಯಾದ ವೇಗದಿಂದ ನಡೆದ ಘಟನೆ ನಡೆದಿದ್ದು ಸ್ಥಳಕ್ಕೆ ಪಿಎಸ್ಐ ರಮೇಶ್ ಗುಗ್ರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular