ಚಿಕ್ಕಬಳ್ಳಾಪುರ : ಗೋಲಿ ಜೂಜಾಟ ವೇಳೆ ಗಲಾಟೆ ನಡೆದ ಹಿನ್ನೆಲೆ ಮೂವ್ವರಿಗೆ ಚಾಕು ಇರಿತವಾಗಿ ಇಬ್ಬರು ದಾರುಣ ಸಾವನಪ್ಪಿದ ಘಟನೆ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಲಿಂಗಮಯ್ಯ 38 ಹಾಗೂ ಪ್ರತಾಪ್ 25 ಎಂದು ತಿಳಿದಿದೆ. ಒಬ್ಬನ ಸ್ಥಿತಿ ಚಿಂತಾಜನಕವಾಗಿದ್ದು ವಿಕ್ಟೋರಿಯ ಅಸ್ಪತ್ರೆಗೆ ರವಾನಿಸಲಾಗಿದೆ. ಪ್ರತಾಪ್ ಹಾಗು ಸಾಗರ್ ಕೃಷ್ಣಪ್ಪರವರ ಮಕ್ಕಳಾಗಿದ್ದು ಲಿಂಗಮಯ್ಯ ಬಟ್ಲಹಳ್ಳಿ ಗ್ರಾಮದ ಆದಿಮೂರ್ತಿಯವರ ಮಗ ಎಂದು ತಿಳಿದಿದೆ. ಗಲಾಟೆ ಬಿಡಿಸಲು ಹೋದ ಸಾಗರ್ ಗೂ ಚಾಕು ಇರಿತವಾಗಿದ್ದು ಕೋಳಿ ಪಂದ್ಯಕ್ಕೆ ಬಳಸುವ ಕತ್ತಿಗಳಿಂದ ತಿವಿದು ಕೊಲೆ ಮಾಡಲಾಗಿದೆ.
ಕೊಲೆ ಆರೋಪಿಗಳನ್ನು ಜಾನ್ (24) ಮಯಾಮ್ ರಾಜ್ (21) ವಂಶಿ (25) ಸಾಯಿನಾಥ್ ದೇವರಾಜ್ (17) ಕೊಲೆ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದು ಬಟ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆಗೆ ಚಿಂತಾಮಣಿ ಆಸ್ಪತ್ರೆಗೆ ರವಾನಿಸಿದ್ದು ಪ್ರಕರಣ ಆರೋಪಿಗಳಿಗೆ ಪೊಲೀಸರು ಬಲೆ ಬಿಸಿದ್ದಾರೆ.