Friday, March 13, 2026
Flats for sale
Homeರಾಜ್ಯಚಿಕ್ಕಬಳ್ಳಾಪುರ ; ಗಂಡನ ಎರಡನೇ ಮದುವೆ ನಡೆಯುತ್ತಿದ್ದ ವೇಳೆ ಚರ್ಚ್ ಗೆ ನುಗ್ಗಿ ಹೆಂಡತಿಯ ಗಲಾಟೆ...

ಚಿಕ್ಕಬಳ್ಳಾಪುರ ; ಗಂಡನ ಎರಡನೇ ಮದುವೆ ನಡೆಯುತ್ತಿದ್ದ ವೇಳೆ ಚರ್ಚ್ ಗೆ ನುಗ್ಗಿ ಹೆಂಡತಿಯ ಗಲಾಟೆ ..!

ಚಿಕ್ಕಬಳ್ಳಾಪುರ ; ಫಿಲಂ ಸ್ಟೈಲ್ ಅಲ್ಲಿ ಕ್ಲೈಮಾಕ್ಸ್ ಸೀನ್ ಬರುವಾಗ ಮದುವೆ ಮನೆಗೆ ನುಗ್ಗಿ ಮೊದಲನೇ ಹೆಂಡತಿ ಹಾಗೂ ಆಕೆಯ ಅಕ್ಕನ ಗಲಾಟೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದ ಕ್ರೈಸ್ಟ್ ಚರ್ಚ್ ನಲ್ಲಿ ನಡೆದಿದೆ .

ವಿಚ್ಚೇಧನ ಪಡೆಯದೆ ಎರಡನೇ ಮದುವೆಯಾಗುತ್ತಿರುವ ಆರೋಪದ ಹಿನ್ನೆಲೆ ಮೊದಲನೇ ಪತ್ನಿ ರಶ್ಮಿ ಹಾಗೂ ಅವರ ಅಕ್ಕ ರೋಸಿ ಎಂಬಾಕೆ ಮದುವೆ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ.ಮದುವೆ ಮನೆಯಲ್ಲಿ ಪರಸ್ಪರರ ನಡುವೆ ಜೋರು ವಾಗ್ವಾದ ಶುರುವಾಗಿದ್ದು ಸಂಬಂಧಿಕರು. ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು .

2018 ರಲ್ಲಿ ಚಿಕ್ಕಬಳ್ಳಾಪುರ ನಗರದ ನಿವಾಸಿ ನೋಹನ್ ಕಾಂತ್ ಹಾಗೂ ಬೆಂಗಳೂರು ಮೂಲದ ರಶ್ಮಿಜೊತೆ ವಿವಾಹವಾಗಿದ್ದು ಪರಸ್ಪರ ಮನಸ್ತಾಪದಿಂದ ದೂರವಾಗಿದ್ದರು.ಆದರೆ ನೋಹನ್ ಕಾಂತ್ ಮತ್ತೋರ್ವ ಯುವತಿಯೊಂದಿಗೆ ಚರ್ಚ್ ನಲ್ಲಿ‌ ವಿವಾಹವಾಗುತ್ತಿದ್ದ ಸುದ್ದಿ ತಿಳಿದು ಚರ್ಚ್ ಗೆ ಆಗಮಿಸಿ ವಿಚ್ಛೇದನೆ ಪಡೆಯದೆ ಮದುವೆಯಾಗುತ್ತಿರುವುದಾಗಿ ಗಲಾಟೆ ಮಾಡಿದ್ದಾಳೆ.ಆದರೆ ವಿಚ್ಚೇದನೆ ಪಡೆದು ಎರಡನೇ ಮದುವೆಯಾಗುತ್ತಿರುವುದಾಗಿ ಗಂಡ ನೋಹನ್ ಕಾಂತ್ ಸ್ಪಷ್ಟನೆ ನೀಡಿದ್ದು ಮದುವೆಗೆ ಅಡ್ಡಿಪಡಿಸುವ ನೆಪದಲ್ಲಿ ರಶ್ಮಿ ಹಾಗೂ ರೋಸಿ ಯನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular