ಚಿಕ್ಕಬಳ್ಳಾಪುರ : ಕಲುಷಿತ ನೀರು ಸೇವಿಸಿ 400 ಜನರಿಗೆ ಆರೋಗ್ಯದಲ್ಲಿ ಏರುಪೇರಾಗಿ ಇಡೀ ಗ್ರಾಮಕ್ಕೆ ಗ್ರಾಮದ ಜನ ಅನಾರೋಗ್ಯದಿಂದ ಬಳಲುತ್ತಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಭೀಮನಹಳ್ಳಿಯಲ್ಲಿ ನಡೆದಿದೆ.


ಕಳೆದ 20 ದಿನಗಳಿಂದ ಗ್ರಾಮಸ್ಥರು ಚರ್ಮದ ಖಾಯಿಲೆ, ಜ್ವರ, ಕೆಮ್ಮು, ನೆಗಡಿ,ಡೆಂಗ್ಯೂ ಯಿಂದ ಬಳಲುತ್ತಿದ್ದು ಕಲುಷಿತ ನೀರು ಕುಡಿದು 400 ಜನರಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿದೆ.
ರಜೆ ಯಲ್ಲಿದ್ದೀನಿ ಸೋಮವಾರ ಬರುತ್ತೀನಿ ಎಂದು ತಾಲೂಕು ಟಿಎಚ್ಒ ಹೇಮಾ ಹೇಳಿದ್ದು ಗ್ರಾಮಾಪಂಚಾಯತಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲವೆಂದು ಗ್ರಾಮಸ್ಥರು ಆರೋಗ್ಯ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ಅಧಿಕಾರಿಗಳುಜಲಜೀವನ್ ಮಿಷನ್ ಯೋಜನೆಯಡಿ ನೂತನ ಬೋರ್ ವೆಲ್ ಕೊರೆಸಿದ್ದು ಜಲಜೀವನ್ ಮಿಷನ್ ಪೈಪ್ಲೈನ್ ನಲ್ಲಿ ಕಲುಷಿತ ನೀರು ಮಿಶ್ರಣವಾಹಗಿರುವ ಶಂಕೆ ವ್ಯಕ್ತವಾಗಿದೆ.