Friday, March 13, 2026
Flats for sale
Homeರಾಜ್ಯಚಿಕ್ಕಬಳ್ಳಾಪುರ : ಆಷಾಢ ಮಾಸಕ್ಕೆ ತವರಿಗೆ ಬಂದ ಯುವತಿ ಪ್ರಿಯಕರನ ಜೊತೆ ವೇಲನ್ನು ಟೊಂಕಕ್ಕೆ ಕಟ್ಟಿ...

ಚಿಕ್ಕಬಳ್ಳಾಪುರ : ಆಷಾಢ ಮಾಸಕ್ಕೆ ತವರಿಗೆ ಬಂದ ಯುವತಿ ಪ್ರಿಯಕರನ ಜೊತೆ ವೇಲನ್ನು ಟೊಂಕಕ್ಕೆ ಕಟ್ಟಿ ಕೃಷಿ ಹೊಂಡದ ನೀರಿಗೆ ಹಾರಿ ಸಾವಿಗೆ ಶರಣು.

ಚಿಕ್ಕಬಳ್ಳಾಪುರ : ವೇಲನ್ನು ಟೊಂಕಕ್ಕೆ ಕಟ್ಟಿಕೊಂಡು ಕೃಷಿ ಹೊಂಡದ ನೀರಿಗೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂತಾಮಣಿ ತಾಲೂಕಿನ ಎಂ.ಮುದ್ದಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ಚಿಂತಾಮಣಿ ತಾಲೂಕು ಕಾಚಹಳ್ಳಿ ಗ್ರಾಮದ ಅನುಷಾ (19) ಹಾಗೂ ಕೋರ್ಲಪರ್ತಿ ಬಳಿಯ ಎಂ ಮುದ್ದಲಹಳ್ಳಿ ಗ್ರಾಮದ ವೇಣು (21)ವರ್ಷ ಎಂದು ತಿಳಿದು ಬಂದಿದೆ. 2 ವರ್ಷದಿಂದ ಪ್ರೀತಿಯಲಿದ್ದ ಪ್ರೇಮಿಗಳು ದುರಂತ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ದೊಡ್ಡಪಲ್ಲಿ ಗ್ರಾಮ, ಸೋಮನಾಥಪುರ ಪಂಚಾಯತಿ, ಚೇಳೂರು ತಾಲೂಕಿನ ವಕ್ಕಲಿಗ ಜನಾಂಗಕ್ಕೆ ಸೇರಿದ ಅನುಷಾ ಹಾಗೂ ಚಿಂತಾಮಣಿ ತಾಲೂಕಿನ ಎಂ ಮುದ್ದಲಹಳ್ಳಿ ಗ್ರಾಮದ ಅಜ್ಜಿ ಮನೆಗೆ ರಜೆ ದಿನಗಳಲ್ಲಿ ಆಗಾಗ ಬರುತ್ತಿದ್ದಳು ಇದೇ ವೇಳೆ ಅದೇ ಗ್ರಾಮದ ಭೋವಿ ಸಮಾಜದ ವೇಣು ಎಂಬ ಯುವಕನ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದು ಸುಮಾರು 2 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇನ್ನೂ ಎಲ್ಲಾ ಸರಿಹೋಗುತ್ತೆ ಎಂದು ಇದ್ದ ಪ್ರೇಮಿಗಳ ವಿಚಾರ ಮನೆಯಲ್ಲಿ ಗೋತ್ತಾಗಿ ಪ್ರೀತಿಯನ್ನು ಒಪ್ಪದೇ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗ್ರಾಮದ ಚೌಡರೆಡ್ಡಿ ಎಂಬ ಯುವಕನ ಜೊತೆ ಮದುವೆ ಕಳೆದ ತಿಂಗಳ ಹಿಂದೆ 25 -6 -24 ರಂದು ಮದುವೆ ಮಾಡಿಸಿದ್ದರು. ಇನ್ನೂ ಗಂಡನ ಜೊತೆ ದಾಬಸ್ ಪೇಟೆಯಲ್ಲಿ ಸಂಸಾರ ನಡೆಸುತ್ತಿದ್ದ ಅನುಷಾಳನ್ನು ಗಂಡ ಚೌಡರೆಡ್ಡಿ ಅಶಾಢ ಮಾಸದ ಸಲುವಾಗಿ ಅನುಷಾಳ ತವರೂರು ದೊಡ್ಡಪಲ್ಲಿ ಗ್ರಾಮಕ್ಕೆ ಕಳುಹಿಸುದ್ದಾರೆ.

ಇನ್ನು ಮೊದಲೇ ಪ್ರೀತಿಯಲ್ಲಿದ್ದ ಅನುಷಾ ಹಾಗೂ ವೇಣು ಮತ್ತೆ ದೂರವಾಣಿ ಮೂಲಕ ಸಂಪರ್ಕ ಮಾಡಿಕೊಂಡಿದ್ದಾರೆ. ಇನ್ನೂ ಗಂಡನಿಗೆ ಎಟಿಎಂ ಮಾಡಿಸಬೇಕು ಎಂದು ಕಳೆದ ದಿನ ಹೋಗಿದ್ದು ಪ್ರೀಯಕರ ವೇಣು ಜೊತೆ ಸೇರಿ ಎಂ ಮುದ್ದಲಹಳ್ಳಿ ಗ್ರಾಮದ ತೋಟಕ್ಕೆ ಹೋಗಿ ಕೆಲಸಮಯ ಮಾತುಕತೆ ನಡೆಸಿಕೊಂಡು ನಮ್ಮನ್ನು ಈ ಪ್ರಪಂಚದಲ್ಲಿ ಬದುಕಲು ಬಿಡುವುದಿಲ್ಲಾ ಎಂದು ಚಲಪತಿ ಎಂಬುವವರ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಪ್ರೀತಿ ಪ್ರೇಮ ವಿಚಾರ ತಿಳಿಸಿದರು ಪೋಷಕರು ಒಪ್ಪದ ಹಿನ್ನಲೇ ಮುಂದೆಯೂ ನಮ್ಮ ಪ್ರೀತಿಯನ್ನು ಒಪ್ಪುವುದಿಲ್ಲ ಎಂದು ಹೇಳಿ ತಮ್ಮ ಮೊಬೈಲ್ ಪೋನ್ ಹಾಗೂ ಪರ್ಸ್ಗಳನ್ನು ಪಕ್ಕಕ್ಕೆ ಇಟ್ಟು, ಇಬ್ಬರು ಅಪ್ಪಿಕೊಂಡು ವೇಲ್ ನಲ್ಲಿ ಸುತ್ತಿಕೊಂಡು ಕೃಷಿಹೊಂಡಕ್ಕೆ ಹಾರಿ ಬಿದ್ದಿದ್ದಾರೆ. ಇನ್ನೂ ಸಂಜೆಯ ನಂತರ ಗಂಡ ಚೌಡರೆಡ್ಡಿ ಅನುಷಾಗೆ ಪೋನ್ ಮಾಡಿದರು ತಗೆಯದ ಹಿನ್ನಲೇ ಗ್ರಾಮಕ್ಕೆ ಬಂದು ಹುಡುಕಾಟ ನಡೆಸಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನೂ ಬೆಳಗ್ಗೆ ಚಲಪತಿ ಅವರು ತೋಟಕ್ಕೆ ಬಂದ ವೇಳೆ ಮೊಬೈಲ್ ಪೋನ್ ಗಳು ಹಾಗೂ ಪರ್ಸ್, ಚಪ್ಪಲಿಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೃಷಿಹೊಂಡದಲ್ಲಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಇಬ್ಬರು ವೇಲ್ ಸುತ್ತಿಕೊಂಡು ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇನ್ನೂ ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅನುಷಾ ಗಂಡ ಚೌಡರೆಡ್ಡಿ ಅವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿಯಂತೆ ಸ್ಥಳಕ್ಕೆ ಭೇಟಿ ಕೊಟ್ಟ ಗಂಡ ಚೌಡರೆಡ್ಡಿ ಮೃತಳನ್ನು ಪತ್ನಿ ಎಂದು ಗುರುತ್ತಿಸಿದ್ದಾನೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೃತ ದೇಹಗಳನ್ನು ಚಿಂತಾಮಣಿ ಸಾರ್ವಜನಿಕ ಶವಗಾರಕ್ಕೆ ರವಾನಿಸಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸಿ, ಡಿವೈಎಸ್ಪಿ ಮುರಳೀಧರದ ಮತ್ತು ಸಿಬ್ಬಂದಿ ಬೇಟಿ ನೀಡಿ ಸ್ಥಳ ಪರಿಶಿಲನೆ ನಡೆಸಿದ್ದು, ಕೇಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular