Wednesday, March 4, 2026
Flats for sale
Homeರಾಜ್ಯಚಾಮರಾಜನಗರ : ಹುಲಿ ಸೆರೆ ಕ್ಯೂಬಿಂಗ್ ಗೆ ಬಂದಿದ್ದ ಆನೆಗೆ ಹೆಜ್ಜೇನು ದಾಳಿ,ಸಾರಿಗೆ ಬಸ್ ತಾಣಕ್ಕೆ...

ಚಾಮರಾಜನಗರ : ಹುಲಿ ಸೆರೆ ಕ್ಯೂಬಿಂಗ್ ಗೆ ಬಂದಿದ್ದ ಆನೆಗೆ ಹೆಜ್ಜೇನು ದಾಳಿ,ಸಾರಿಗೆ ಬಸ್ ತಾಣಕ್ಕೆ ನುಗ್ಗಿದ ಸಾಕಾನೆ, ದಿಕ್ಕಾಪಾಲಾಗಿ ಓಡಿದ ಸಾರ್ವಜನಿಕರು.

ಚಾಮರಾಜನಗರ : ಹುಲಿ ಸೆರೆ ಕ್ಯೂಬಿಂಗ್ ಸಲುವಾಗಿ ಬಂದಿದ್ದ ಸಾಕಾನೆ ಪಾರ್ಥಸಾರಥಿಗೆ ಜೇನು ಕಚ್ಚಿದ ಪರಿಣಾಮ ಇದು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿ ಪಟ್ಟಣದೊಳಗೆ ನುಗ್ಗಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ತಾಲೂಕಿನ ಕಲ್ಲಹಳ್ಳಿ ಗ್ರಾಮದ ಬಳಿ ಹುಲಿ ಸೆರೆ ಕ್ಯೂಬಿಂಗ್ ಸಲುವಾಗಿ ರಾಂಪುರ ಸಾಕಾನೆ ಶಿಬಿರದ ಪಾರ್ಥಸಾರಥಿಯನ್ನು ಕರೆತರಲಾಗಿತ್ತು. ನೀರು ಕುಡಿಸಲು ತೆರಳಿದ್ದಾಗ ಹೆಜ್ಜೇನು ದಾಳಿ ನಡೆಸಿದೆ. ನಂತರ ಮಾವುತ ಚೇತನ್ ಮಾತು ಕೇಳದೇ ಆನೆ ಅನಿಯಂತ್ರಿತವಾಗಿ ಪಟ್ಟಣದೊಳಗೆ ನುಗ್ಗಿದೆ. ಇದರಿಂದ ಜನರಲ್ಲಿ ಆತಂಕ ಉಂಟಾಗಿ ಇವರೂ ಸಹ ದಿಕ್ಕಾಪಾಲಾಗಿ ಓಡಿದರು. ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರು ಆನೆಯನ್ನುಹಿಂಬಾಲಿಸಿಕೊAಡು ಇದನ್ನು ನಿಯಂತ್ರಿಸಲು ಯತ್ನಿಸಿದರು.

ಜೇನ್ನೊಣಗಳ ದಾಳಿಯಿಂದ ಕಂಗೆಟ್ಟ ಆನೆ, ಪಟ್ಟಣದ ಸಾರಿಗೆ ಬಸ್ ನಿಲ್ದಾಣದೊಳಗೆ ನುಗ್ಗಿತ್ತು. ಆನೆಯ ದಿಢೀರ್ ಆಗಮನದಿಂದ ಪ್ರಯಾಣಿಕರು, ಸಾರ್ವಜನಿಕರು, ಬೈಕ್ ಸವಾರರು ಗಾಬರಿಯಿಂದ ದಿಕ್ಕಾಪಾಲಾಗಿ ಓಡಿದರು. ಅರಣ್ಯ ಇಲಾಖೆಯವರು ಸಾಕಾನೆಯನ್ನು ಹಿಂಬಾಲಿಸಿದರು. ಇದಕ್ಕೆ ಕೈಜೋಡಿಸಿದ ಪೊಲೀಸರು, ಮಡಹಳ್ಳಿ ರಸ್ತೆಯಲ್ಲಿ ಬೈಕ್ ಸಂಚಾರಕ್ಕೆ ತಡೆಹಾಕಿದರು. ಸವಾರರು ಬೈಕ್ ಬಿಟ್ಟು, ಅಕ್ಕಪಕ್ಕದ ಮನೆಗಳ ಮಹಡಿ ಏರಿ ತಪ್ಪಿಸಿಕೊಂಡರು. ಎದುರಿಗೆ ಜನರು ಸಿಕ್ಕರೂ ಸಹ ಇದು ಸಾಕಾನೆಯಾದ ಕಾರಣ ಯಾರಿಗೂ ತೊಂದರೆಯುAಟುಮಾಡಲಿಲ್ಲ ಎನ್ನುವುದು ಗಮನಾರ್ಹ.

RELATED ARTICLES

LEAVE A REPLY

Please enter your comment!
Please enter your name here

Most Popular