Friday, March 13, 2026
Flats for sale
Homeರಾಜ್ಯಚಾಮರಾಜನಗರ : ವಿದ್ಯಾರ್ಥಿನಿಗೆ ಮರ್ಮಾಂಗದ ಫೋಟೋ ಕಳಿಸಿ ಮಂಚಕ್ಕೆ ಕರೆಯುತ್ತಿದ್ದ ಕಾಮುಕ ಪೊಲೀಸಪ್ಪನ ವಿರುದ್ಧ ದೂರು...

ಚಾಮರಾಜನಗರ : ವಿದ್ಯಾರ್ಥಿನಿಗೆ ಮರ್ಮಾಂಗದ ಫೋಟೋ ಕಳಿಸಿ ಮಂಚಕ್ಕೆ ಕರೆಯುತ್ತಿದ್ದ ಕಾಮುಕ ಪೊಲೀಸಪ್ಪನ ವಿರುದ್ಧ ದೂರು ದಾಖಲು.

ಚಾಮರಾಜನಗರ : ಸುಂದರವಾದ ವಿದ್ಯಾರ್ಥಿನಿಯರನ್ನು ಕಂಡು ಜೊಲ್ಲು ಸುರಿಸುವ ಖಾಕಿ ಪೊಲೀಸ್ ತನ್ನ ಕಾಮುಕ ಬುದ್ದಿ ತೋರಿಸಲು ಹೋಗಿ ಸಿಕ್ಕಿ ಬಿದ್ದ ಘಟನೆ ವರದಿಯಾಗಿದೆ.

ಚಾಮರಾಜನಗರದ ಲಾ -ಎಂಡ್ ಆರ್ಡರ್ ಕಾಪಾಡೋ ಪ್ರೊಬೇಷನರಿ ಪಿಎಸ್ಐ ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂಬ ಬಗ್ಗೆ ದೂರು ದಾಖಲಾಗಿದ್ದು ರಕ್ಷಣೆ ಕೊಡುವ ಪೋಲೀಸರೇ ಈ ರೀತಿ ಕಾಮುಕನಾಗಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವ ಆರೋಪ ಕೇಳಿ ಬಂದಿದೆ.

ಕಾಮುಕ ಪೊಲೀಸಪ್ಪನನ್ನು ಪಿಎಸ್ಐ ಜಗದೀಶ್ ಎಂದು ತಿಳಿದುಬಂದಿದೆ.ಮೈಸೂರು ಮೂಲದ ಕಾಲೇಜು ವಿದ್ಯಾರ್ಥಿನಿಯರಿಗೆ ಗಾಳ ಹಾಕುತ್ತಿದ್ದು. ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದು ಸುಂದರವಾದ ವಿದ್ಯಾರ್ಥಿನಿಯರು ರಿಕ್ವೆಸ್ಟ್ ಎಕ್ಸೆಪ್ಟ್ ಮಾಡಿದ ತಕ್ಷಣ ವಿದ್ಯಾರ್ಥಿನಿಯರಿಗೆ ಮೊಬೈಲ್ ನಂಬರ್ ಕೇಳಿ ಪಡೆಯುತ್ತಿದ್ದ. ಬಳಿಕ ವಾಟ್ಸಪ್ ಮೂಲಕ ದಿನ ನಿತ್ಯ ವಿದ್ಯಾರ್ಥಿನಿಯರಿಗೆ ಟಾರ್ಚರ್ ಮಾಡುತ್ತಿದ್ದ. ಲವ್ ಮಾಡು ಔಟಿಂಗ್​ಗೆ ಹೋಗೋಣ ಮಜಾ ಮಾಡೋಣ ಅಂತ ಸಂದೇಶ ಕಳಿಸುತ್ತಿದ್ದ. ಆಚೆ ಬರದೆ ಹೋದ್ರೆ ಸರಿ ಇರುವುದಿಲ್ಲವೆಂದು ಬ್ಲಾಕ್ ಮೇಲ್ ಮಾಡುತ್ತಿದ್ದ.ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತಿದ್ದ ಎಂದು ದೂರಿನಲ್ಲಿ ದಾಖಲಾಗಿದೆ.

ಈ ಬಗ್ಗೆ ಮೈಸೂರಿನ ಖಾಸಗಿ ಕಾಲೇಜ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ಗಿರಿಜನ ವಿದ್ಯಾರ್ಥಿನಿಯರಿಗೆ ಮೆಸೇಜ್ ಮಾಡಿ ಟಾರ್ಚರ್ ಮಾಡಿದ್ದಾನೆ. ಮೈ ಜಿ ಬುಡಕಟ್ಟು ಸೋಲಿಗ ಅಭಿವೃದ್ಧಿ ಸಂಘದವರು ಮೈಸೂರಿನ ಐಜಿ ಕಚೇರಿಗೆ ವಿದ್ಯಾರ್ಥಿನಿಯರ ಪರ ದೂರು ನೀಡಿದ್ದಾರೆ.ಚಾಮರಾಜನಗರ ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದ್ದು ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಚಾಮರಾಜನಗರ ಡಿವೈಎಸ್ಪಿಗೆ ತನಿಖೆ ಹೊಣೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular