ಚಾಮರಾಜನಗರ : ಪಾದಯಾತ್ರೆ ಹೋದವನಿಗೆ ಬಿಗ್ ಶಾಕ್ ಕಾಡಿದ್ದು
ಪಾದಯಾತ್ರೆ ಹೋಗಿದ್ದ ಭಕ್ತನ ಮೇಲೆ ಚಿರತೆ ಅಟ್ಯಾಕ್ ಮಾಡಿದೆ.
ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟದಿಂದ ಮೆಟ್ಟಿಲನ್ನು ಹತ್ತಿ ಹೋಗುವ ವೇಳೆ ಅವಘಡ ಸಂಭವಿಸಿದ್ದು ಚಿರತೆ ಕಂಡು ಭಯದಿಂದ ಜೊತೆಯಲ್ಲಿದ್ದ ಸ್ನೇಹಿತರು ಓಡಿಹೋಗಿದ್ದಾರೆ.
ಮಂಡ್ಯ ಮೂಲದ ಪ್ರವೀಣ್ ಚಿರತೆ ದಾಳಿಗೆ ಒಳಗಾಗಿರುವ ವ್ಯಕ್ತಿ, ಚಿರತೆ ದಾಳಿ ಬಳಿಕ ಪ್ರವೀಣ್ ನಾಪತ್ತೆಯಾಗಿದ್ದು ಅರಣ್ಯ ಸಿಬ್ಬಂದಿ ಪಡೆ ಕಾರ್ಯಚರಣೆ ನಡೆಸಿದ್ದಾರೆ.ಬಳಿಕ ಅಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.
ಪ್ರವೀಣ್ ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಪೋನ್ ರಿಂಗ್ ಆದ್ರೂ ಕಾಲ್ ರಿಸೀವ್ ಮಾಡದ ಕಾರಣ ಹುಡುಕಾಟ ನಡೆಸಿದ್ದರು.
ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಸ್ಥಳೀಯರು ವಿಚಾರ ಮುಟ್ಟಿಸಿದ್ದು. ಕಳೆದ ವಾರವು ಕೂಡ ಬೆಟ್ಟದ ರಸ್ತೆಯಲ್ಲಿ ಚಿರತೆ ಹಾಗೂ ಮರಿಗಳು ಕೂಡ ಕಾಣಿಸಿಕೊಂಡಿದ್ದು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುವ ಭಕ್ತರು ಭಯಭೀತರಾಗಿದ್ದಾರೆ.


