ಚಾಮರಾಜನಗರ : ಮೈಸೂರು ಊಟಿ ರಸ್ತೆ ಸಂಪರ್ಕಿಸುವ ಬಂಡೀಪುರ ಅಭಯಾರಣ್ಯದಲ್ಲಿ ಸಂಚರಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಕಾಡುಪ್ರಾಣಿಗಳು ಕಂಡುಬರುವುದು ಸಾಮಾನ್ಯ ಆದರೆ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರು ತಮ್ಮ ಕಾರನ್ನು ನಿಲ್ಲಿಸಿ ಫೋಟೋ ಸೆಲ್ಫಿ ತೆಗೆಯುವ ಚಾಳಿ ಹೆಚ್ಚಾಗಿದೆ.ಅರಣ್ಯ ಇಲಾಖೆ ಅನೇಕ ಬಾರಿ ಸೂಚನೆ ನೀಡಿದರು ಕ್ಯಾರೇ ಎನ್ನುತ್ತಿದ್ದಾರೆ.
ಬಂಡೀಪುರದಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿದಿರುವ ಘಟನೆ ನಡೆದಿದ್ದು, ಸದ್ಯ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ. ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಕೇರಳದ ಪ್ರವಾಸಿಗನೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾಡಾನೆ ಮುಂದೆ ಹೋಗಿದ್ದಾನೆ.
ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಆನೆ ದಾಳಿ ನಡೆಸಿದ್ದು ತನ್ನ ಪ್ರಾಣ ರಕ್ಷಣೆಗಾಗಿ ವ್ಯಕ್ತಿ ಓಡಿಹೋಗುವ ವಿಡಿಯೋ ವೈರಲ್ ಆಗಿದೆ,ಬಳಿಕ ಆನೆ ಆತನನ್ನು ತುಳಿದಿದ್ದು ,ಅದೃಷ್ಟವಶಾತ್ ವ್ಯಕ್ತಿ ಪ್ರಾಣಪಾಯದಿಂದ ಪಾರಾಗಿದ್ದಾನೆ.


