ಚಾಮರಾಜನಗರ : ಬಂಡೀಪುರ-ಮುದುಮಲೈ ಹೆದ್ದಾರಿಯಲ್ಲಿ ಹುಲಿ ದಾಳಿ ನಡೆಸಿದ ಪರಿಣಾಮ ಆನೆ ಮರಿ ನಡು ರಸ್ತೆಯಲ್ಲೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿದೆ.ಮೂರು ತಿಂಗಳ ಆನೆಮರಿಯ ಮೇಲೆ ಹುಲಿ ದಾಳಿ ಮಾಡಿದ್ದು ನಡು ರಸ್ತೆಯಲ್ಲೇ ತಾಯಿ ಆನೆ ರೋದಿಸುತ್ತಿರುವ ದೃಶ್ಯ ಮನಕುಲಕುವಂತಿದೆ.
ರಸ್ತೆ ಬದಿಯಲ್ಲಿ ಮರಿಯಾನೆ ಮೇಯುತ್ತಿದ್ದ ಸಂದರ್ಭ ಹುಲಿ ಏಕಾ ಏಕಿ ದಾಳಿ ನಡೆಸಿ ಕೊಂದು ಹಾಕಿದೆ. ಕೂಗಳತೆ ದೂರಲ್ಲಿದ್ದ ತಾಯಿಯಾನೆ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಹುಲಿ ಓಡಿ ಹೋಗಿತ್ತು ಎನ್ನಲಾಗುತ್ತಿದೆ. ಇದರಿಂದ ತನ್ನ ಮರಿಯನ್ನು ಕೆಳೆದುಕೊಂಡಿರುವ ತಾಯಿ ಆನೆ ಬಂಡೀಪುರ ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘೀಳಿಡುತ್ತಿದೆ. ಇದರಿಂದ ವಾಹನ ಸವಾರರು ಸಂಚಾರ ಮಾಡಲು ಭಯಪಟ್ಟು ಹಿಂದೆಯೇ ನಿಂತುಕೊಂಡಿದ್ದಾರೆ. ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಕಳೆದ ೨ ವರುಷಗಳಿಂದ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಸಮೀಪದ ಹಳ್ಳಿಗಾಡಿನ ಜನರು ಭಯಬೀತರಾಗಿದ್ದರು.ಇಟ್ತಚಿನ ದಿನಗಳಲ್ಲಿ ಹಲವಾರು ಜನರು ಹುಲಿ ದಾಳಿಗೆ ಬಲಿಯಾಗಿದ್ದರು. ರಸ್ತೆಯ ಮಧ್ಯದಲ್ಲೇ ಹುಲಿ ದಾಳಿ ಮಾಡಿದ ಪರಿಣಾಮ ಇದರಿಂದ ಟ್ರಾಫಿಕ್ ಜಾಮ್ ಆಗಿದ್ದು ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಬಂಡೀಪುರ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನಗಳು ತಾಯಿಯಾನೆ ದಾಳಿ ಮಾಡಬಹುದು ಎಂಬ ಆಂತಕದಲ್ಲಿ ಸಂಚಾರ ಮಾಡದೆ ನಿಂತಲ್ಲೆ ನಿಂತಿವೆ. ಮೃತ ಕಾಡಾನೆಯನ್ನು ರಸ್ತೆಯಿಂದ ತೆರವು ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು.ಮರಿಯಾನೆ ಮೃತ ದೇಹದ ಮುಂದೆ ನಿಂತು ತಾಯಿಯಾನೆ ರೋಧಿಸುತ್ತಿದೆ.