Thursday, July 23, 2026
Homeರಾಜ್ಯಚಾಮರಾಜನಗರ : ಕಂಠಪೂರ್ತಿ ಕುಡಿದು ಟಿಪ್ಪರ್ ಲಾರಿ ಚಲಾಯಿಸಿ ಬೈಕ್ ಗೆ ಡಿಕ್ಕಿ,ಒಂದೇ ಕುಟುಂಬದ ಮೂವರು...

ಚಾಮರಾಜನಗರ : ಕಂಠಪೂರ್ತಿ ಕುಡಿದು ಟಿಪ್ಪರ್ ಲಾರಿ ಚಲಾಯಿಸಿ ಬೈಕ್ ಗೆ ಡಿಕ್ಕಿ,ಒಂದೇ ಕುಟುಂಬದ ಮೂವರು ದಾರುಣ ಸಾವು..!

ಚಾಮರಾಜನಗರ : ಕಂಠಪೂರ್ತಿ ಕುಡಿದು ಲಾರಿ ಚಲಾಯಿಸಿದ ಹಿನ್ನೆಲೆ ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ಟಿಪ್ಪರ್ ಲಾರಿ ಹರಿದು ಕೇರಳದ ವಯನಾಡಿನ ಮೂವರು ದುರ್ಮರಣ ಹೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಯಲ್ಲಿ ನಡೆದಿದೆ.

ಮೃತರನ್ನು ದನೇಶ್, ಪತ್ನಿಅಂಜು ಮತ್ತು ಮಗ ಎಂದು ಗುರುತಿಸಲಾಗಿದೆ.

ಮೂವರು ಒಂದೇ ಬೈಕ್​ನಲ್ಲಿ ಕೇರಳದಿಂದ ಗುಂಡ್ಲುಪೇಟೆ ಕಡೆಗೆ ಬೈಕ್​ನಲ್ಲಿ ಬರುತ್ತಿದ್ದರು. ಈ ವೇಳೆ ಕೂತನೂರು ಗುಡ್ಡದಿಂದ ಕಲ್ಲು ತುಂಬಿಕೊಂಡು ಬರುತ್ತಿದ್ದ ಕೆ.ಎ.11-ಬಿ 8497 ನೋಂದಣಿಯ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಕಂಠಪೂರ್ತಿ ಕುಡಿದು ಚಾಲನೆ ಮಾಡುತ್ತಿದ್ದ ಡ್ರೈವರ್. ಕುಡಿದ ಮತ್ತಿನಲ್ಲಿ ವೇಗವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಟಿಪ್ಪರ್ ಚಾಲಕನ ಅಜಾರೂಕ ಚಾಲನೆಯಿಂದ ಮುಂಬದಿ ಹೋಗುತ್ತಿದ್ದ ಬೈಕ್ ಗೆ ಗುದ್ದಿದ್ದಾನೆ. ಬೈಕ್ ಸವಾರನ ಮೇಲೆ ಲಾರಿ ಹರಿದು ದೇಹ ರಸ್ತೆಯಲ್ಲೇ ಬಿದ್ದಿದ್ದು, ಇನ್ನಿಬ್ಬರು ಲಾರಿ ಅಡಿಯಲ್ಲಿ ಬೈಕ್ ಸಮೇತ ಸಿಲುಕಿಕೊಂಡಿದ್ದರೂ ಸಹ ಸುಮಾರು 300 ಮೀಟರ್ ನಷ್ಟು ಲಾರಿ ಎಳೆದುಕೊಂಡು ಬಂದಿದೆ. ಇಬ್ಬರ ದೇಹದ ಮಾಂಸದ ತುಂಡುಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದು ಅಪಘಾತ ನಡೆದ ಸ್ಥಳ ಭೀಕರವಾಗಿದೆ. ಮೃತ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಳಕ್ಕೆ ಗುಂಡ್ಲುಪೇಟೆ ಪಟ್ಟಣ ಠಾಣೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular