ಚಳ್ಳಕೆರೆ : ನಗರದ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನನ್ನ ಮಣ್ಣು ನನ್ನ ದೇಶ” ಕಾರ್ಯಕ್ರಮಕ್ಕೆ ಚಾಲನೆ ದೇಶದ ಭಕ್ತಿಯನ್ನು ದೇಶದ ಮೂಲೆಮೂಲೆಗೆ ಪಸರಿಸುವ ಕಾರ್ಯಕ್ರಮ ಇದಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರು ಹಾಗೂ ಸಂಸದ ಎ.ನಾರಾಯಣಸ್ವಾಮಿ ಹೇಳಿದರು.
ಚಳ್ಳಕೆರೆ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಪೂಜೆ ಸಲ್ಲಿಸಿ, ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ, ನಂತರ ಮಾತನಾಡಿದ ನಾರಾಯಣ ಸ್ವಾಮಿ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ “ನನ್ನ ಮಣ್ಣು ನನ್ನ ದೇಶ” ಪರಿಕಲ್ಪನೆಯಲ್ಲಿ ದೇಶದ ಭಕ್ತಿಯನ್ನು ದೇಶದ ಮೂಲೆಮೂಲೆಗೆ ಪಸರಿಸಬೇಕು.
ಯುವ ಪೀಳಿಗೆಗೆ ದೇಶದ ಮಣ್ಣಿನ ಸತ್ವವನ್ನೂ ಪ್ರತಿ ಮನೆಗೆ, ಯುವಶಕ್ತಿಗೆ ತಲುಪಿಸಬೇಕು ಎಂಬುದು ಮೋದಿಯವರ ಕನಸು. ಇದರ ಜೊತೆ ಜೊತೆಗೆ ದೇಶದ ಸೇನಾನಿಗಳು, ದೇಶದ ಸೈನಿಕರು ದೇಶಕ್ಕೆ ಮಾಡಿದ ತ್ಯಾಗವನ್ನು, ಸ್ವಾತಂತ್ರ್ಯ ಹೋರಾಟ ಸ್ಮರಿಸಬೇಕು.
ಸ್ವಾತಂತ್ರ್ಯ ಹೋರಾಟಗಾರರ, ಸೇನಾನಿಗಳ ಸಮರ್ಪಣಾಭಾವಕ್ಕಾಗಿ, ಅಮೃತ ಮಹೋತ್ಸವದ ಅಂಗವಾಗಿ ದೆಹಲಿಯಲ್ಲಿ “ಅಮೃತ ವನ” ನಿರ್ಮಿಸಲಾಗುತ್ತಿದೆ. ಗೌರವಯುತವಾಗಿ ದೇಶದ ಪ್ರತಿ ಮೂಲೆಯ ಭೂತಾಯಿ ಮಣ್ಣನ್ನು ತರಿಸಿ ಉದ್ಯಾನ ನಿರ್ಮಾಣ ಮಾಡಿ ವಿಶ್ವಕ್ಕೆ ಸಮರ್ಪಣೆ ಮಾಡುವ ಕಾರ್ಯಕ್ರಮ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಜಯಪಾಲಯ್ಯ ರಾಮದಾಸ್ ಜೆಕೆ ತಿಪ್ಪೇಶ್ ಮುಂತಾದವರು ಹಾಜರಿದ್ದರು


