ಚಳ್ಳಕೆರೆ : ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಮಳೆರಾಯನ ವಕ್ರದೃಷ್ಟಿಯಿಂದ ಬಾರದ ಮಳೆ ಶೇಂಗಾ ವಿವಿಧ ಬೆಳೆಗಳು ಕಮರಿಹೋಗುತ್ತಿದ್ದು ಈ ಬಾರಿಯೂ ಮಳೆಯಿಲ್ಲದೆ ಮುಂದಿನ ದಿನಗಳು ತೀವ್ರ ಬರಗಾಲಕ್ಕೆ ಸಿಲುಕುವ ಆತಂಕ ರೈತರಲ್ಲಿ ಮನೆ ಮಾಡಿದೆ.
ತಾಲೂಕಿನ ಮುಂಗಾರು ಆರಂಭದಲ್ಲಿ ಅಲ್ಪಸ್ವಲ್ಪ ಮಳೆ ಬಂದು ರೈತಾಪಿ ವರ್ಗ ಸಾಲಾ ಸೂಲ ಮಾಡಿ ದುಬಾರಿ ಬಿತ್ತನೆ ಬೀಜ.ಗೊಬ್ಬರ.ಕೂಲಿ.ಕೃಷಿ ಸೇರಿದಂತೆ ಬೆಳೆ ಬಿತ್ತನೆ ಮಾಡಿ ಉತ್ತಮ ಇಳುವರಿ ಕನಸು ಕಂಡಿದ್ದ ರೈತರಿಗೆ ಮಳೆರಾಯನ ವಕ್ರದೃಷ್ಠಿಯಿಂದ ಶೇಂಗಾ.ತೊಗರಿ.ಸಜ್ಜೆ.ಜೋಳ ಸೇರಿದಂತೆ ವಿವಿಧ ಬೆಳೆಗಳು ಹೂವು.ಕಾಯಿ ಕಟ್ಟುವ ಮುನ್ನವೇ ಬಿಸಿಲಿನ ತಾಪಕ್ಕೆ ಕಮರಿ ಹೋಗುತ್ತಿದ್ದು ಇನ್ನು ಒಂದು ಮಳೆ ಬಾರದಿದ್ದರೆ ಸಂಪೂರ್ಣ ಬೆಳೆಗಳು ನೆಲಕಚ್ಚಲಿದ್ದು ಹಾಕಿದ ಬಂಡವಾಳವೂ ಕೈಸೇರದೆ ಈಗೆ ಒಂದು ತಿಂಗಳು ಮಳೆ ಬಾರದಿದ್ದರೆ ಜನ ಜಸನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗಾಗಿ ಪರದಾಡುವ ಸ್ಥಿತಿ ಎದುರಾಗಿ ತೀವ್ರ ಬರದ ಛಾಯೆ ಆವರಿದಲಿದೆ.
ಒಂದು ತಿಂಗಳಿನಿಂದ ಮೋಡ ಕವಿದ ವಾತಾವರಣ ಇದ್ದರೂ ಒಮ್ಮೆಯೂ ಹದ ಮಳೆ ಬಿದ್ದಿಲ್ಲ. ಆಗೊಮ್ಮೆ ಈಗೊಮ್ಮೆ ಕೆಲವು ಕಡೆ ಮಳೆಎಂದರೆ ಮತ್ತೊಂದು ಕಡೆ ಮಳೆ ಬಾರದೆ ಮುಗಿಲಿನತ್ತ ನೋಡುತ್ತ ರೈತ,
ಎಲ್ಲಿ ಓಡುವಿರಿ ನಿಲ್ಲಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ಹೋಗಿ ಎಂದು ಪ್ರಾರ್ಥನೆ ಮಾಡಿದರೂ ಮಳೆರಾಯ ಕರುಣೆ ತೋರಿಸುತ್ತಿಲ್ಲ.ಬಯಲು ಸೀಮೆಯ ರೈತರು ಸುಮಾರು ಕಳೆದ ಹದಿನೈದು ವರ್ಷಗಳಿಂದ ಸಕಾಲಕ್ಕೆ ಮಳೆ ಬೆಳೆಯಾಗದೇ ಅತಿವೃಷ್ಟಿ-ಅನಾವೃಷ್ಟಿಗೆ ಸಿಲುಕಿ ನಷ್ಟ ಅನುಭವಿಸುತ್ತಲೇ ಇದ್ದಾರೆ. ಬೆಳೆ ಬಾರದೆ ಇದಕ್ಕೆ ಸಂಬಂಧಿಸಿದ ವಿಮೆ ಸಹ ಬರದೇ ಸಾಲಗಾರರಾಗುತ್ತಲೇ ಇದ್ದಾರೆ. ಈ ಹಿಂದೆ ಮಾಡಿರುವ ಸಾಲ ಒಂದು ಕಡೆಯಾದರೆ ಈಗ ಮತ್ತೆ ಮತ್ತೆ ಸಾಲ ಮಾಡಬೇಕಾದ ಸನ್ನಿವೇಶ ಎದುರಾಗು ತ್ತಲೇ ಇವೆ. ಪ್ರತಿ ವರ್ಷದಂತೆ ಈ ಬಾರಿಯೂ ಈರುಳ್ಳಿ, ಶೇಂಗಾ,ತೊಗರಿ,ಸಜ್ಜೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದು,ಮಳೆ ಕೈಕೊಟ್ಟ ಕಾರಣ ಋಷ್ಠಿ ಭೂ ಪ್ರದೇಶಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ ಹೊಲಗಳಲ್ಲಿ ಶೇಂಗಾ ಒಣಗಿರುವ ದೃಶ್ಯ ಕಂಡುಬರುತ್ತದೆ. ನೀರಾವರಿ ಇರುವ ಪ್ರದೇಶಗಳನ್ನು ಹೊರತುಪಡಿಸಿದರೆ ಮಿಕ್ಕಂತೆ ರೈತರಿಗೆ ಈಬಾರಿಯೂ ಭರದ ಛಾಯೆ ಇದ್ದು ರೈತರಲ್ಲಿ ಆತಂಕವನ್ನುಂಟು ಮಾಡಿದೆ.
ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಜಮಧ್ವನಿ ಡಿಜಿಟಲ್ ಮೀಡಿಯಾದೊಂದಿಗೆಮಾತನಾಡಿ, ಬೆಳೆ ಹಾನಿ ಕುರಿತು ಕಂದಾಯ, ಕೃಷಿ ಮತ್ತು ವಿಮಾ ಕಂಪಅಧಿಕಾರಿಗಳು ಸಮೀಕ್ಷೆ ನಡೆಸುತ್ತಿರುವ ಪದ್ಧತಿ ಅವೈಜ್ಞಾನಿಕವಾಗಿದ್ದು ಕಳೆದವರ್ಷ ಬಿತ್ತನೆ ಮಾಡಿದ ಶೇಂಗಾ ಬೆಳೆ ನಷ್ಟ ವಾದರೂ ಬೆಳೆ ವಿಮೆ ಪಾವತಿಮಾಡಿಲ್ಲ. ಈ ಬಾರಿಯೂ ಮಳೆಯಿಲ್ಲದೆ ಬೆಳೆಗಳು ಒಣ ಗಲು ಪ್ರಾರಂಭಿಸಿದ್ದು ತಾಲೂಕಿನ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವುದೋ ಒಂದು ಮೂಲೆಯಲ್ಲಿ ಉತ್ತಮ ಫಸಲು ಇರುವ ಭೂಮಿಯನ್ನು ಆಯ್ಕೆಮಾಡಿಕೊಂಡು ವಿಮೆ ಮಂಜೂರಾತಿಗಾಗಿ ಕಳಿಸುವುದನ್ನು ಬಿಟ್ಟುಗ್ರಾ.ಪಂ. ವ್ಯಾಪ್ತಿಯ ಎಲ್ಲಭೂಮಿಗಳಲ್ಲೂ ಬೆಳೆವಿಮೆ ಕಂಪನಿ ಹಾಗೂ ಇಲಾಖೆ ಅಧಿಕಾರಿಗಳುನಡೆಸುತ್ತಿರುವ ರೈತ ವಿರೋಧಿ, ಅವೈಜ್ಞಾನಿಕ ಪದ್ಧತಿಕೂಡಲೇ ಕೈಬಿಟ್ಟು ಮಳೆ ಕೈಕೊಟ್ಟಿರುವ ಪೂರ್ಣ ಪ್ರದೇಶವನ್ನು ವಿಮೆಗೂಳ ಪಡಿಸಬೇಕೆಂದು ಸರಕಾರಗಳನ್ನು ಒತ್ತಾಯಿಸಿದ್ದಾರೆ.


